ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭಾವ ಕವನವಾಗಿದೆ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಭಾವ ಕವನವಾಗಿದೆ

ಓ ಜೀವವೇ ,
ಎಳೆಯ ನಾನು
ಗೆಳೆಯ ನೀನು
ಮಧುರ ಮಾತು
ಸಿಹಿಯ ನುಡಿದು
ದಿನವ ಬೆಳಗಿದೆ
ಅನು ದಿನ
ನಿನ್ನ ಸ್ನೇಹದ
ಪ್ರೀತಿ ಮಳೆಗೆ
ಹಸಿರು ಚಿಗುರಿದೆ
ತನು ಮನ
ಪರುಷ ಮುಟ್ಟಿ
ಹೊನ್ನವಾಯಿತು
ತುಕ್ಕು ಹಿಡಿದ
ಕಬ್ಬಿಣ
ಭಾವ ಬೆಸುಗೆ
ನಗೆಯ ಸಂಭ್ರಮ
ನಿತ್ಯ ಹಸಿರು
ತೋರಣ
ನಿನ್ನ ಒಲವ
ಚೆಲುವು ರೂಪಕೆ
ದಿನ ದಿನಕೂ
ದಿಬ್ಬಣ
ಎಂತು ಮರೆಯಲಿ
ನಿನ್ನ ನೆನಪು
ನಿತ್ಯ ಬದುಕು
ನಿಬ್ಬಣ
ಗಟ್ಟಿಗೊಂಡಿದೆ
ಹೃದಯ ಭಾಷೆ
ಗೆಲುವು ಕಂಡಿದೆ
ಬದುಕಲಿ
ಸೋಲ ಮರೆಸಿದ
ಜೀವ ಜಯ

ಭಾವ ಕವನವಾಗಿದೆ.


ಡಾ ಶಶಿಕಾಂತ ಪಟ್ಟಣ ರಾಮದುರ್ಗ


8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭಾವ ಕವನವಾಗಿದೆ

  1. ಅತ್ಯುತ್ತಮ ಸುಂದರ ಅಭಿವ್ಯಕ್ತಿ ಸ್ವಾತಂತ್ರ್ಯ

  2. ಸುಂದರ ಭಾವ ತೋರಣ ನಿಮ್ಮ ಕವನ ಸರ್

  3. ತನು ಮನ
    ಪರುಷ ಮುಟ್ಟಿ
    ಹೊನ್ನವಾಯಿತು
    ಎಂಥ ಅತ್ಯದ್ಭುತ ಪ್ರೀತಿಯ ಪರಾಕಾಷ್ಟೆ

  4. ಎಂತು ಮರೆಯಲಿ
    ನಿನ್ನ ನೆನಪು
    ನಿತ್ಯ ಬದುಕು
    ನಿಬ್ಬಣ
    ಜೀವದ ಭಾವ ಕವನವಾದ ಪರಿ ಅನನ್ಯ..ಅನುಪಮ…

Leave a Reply

Back To Top