ಕಾವ್ಯ ಸಂಗಾತಿ
ಶಾರು
ಕನಲಿದ ಬದುಕಿನ ಧ್ಯಾನ
ಒಡಲ ಸುಡುವ ಕಂಬನಿ
ಬಿಡದೆ ಸುರಿವ ಮಳೆ
ತಿನುವ ಕೂಳು ಕೈಗೆಟುಕದ
ನಿಟ್ಟುಸಿರಲಿ ಹರಿವ ಹೊಳೆ
ಬೆಂದು ನೊಂದ ಮಾತು
ಘನಿಕರಿಸದಂತೆ ಸುರಿದಿದೆ
ಗಳಗಳನೆನುತಾ ಹರಿದು ಜೀವ
ನಲುಗಿಸುವಂತೆ ಮಾಡಿದೆ
ಸುರಿವ ಮಳೆ ಒಳಗಿಳಿಯದೆ
ಮನವು ಮರುಭೂಮಿಯಾಗಿದೆ
ಸ್ವಾರ್ಥವಾಗಿ ಸುರಿವ ಹನಿಗೆ
ಜೀವ ರೋಸಿ ಬೆಂದಿದೆ
ಕಂಗೆಟ್ಟ ಕಾಲಕೆ ಉಸಿರಿಂಗಿದೆ
ನಾಳೆ ಕಾಣದ ಹುಸಿ ಜಾವಕೆ
ಹಸಿ ಆರದಂತೆ ನಲುಗುತಿದೆ
ನನಸಾಗದೆ ಕನಸದು ಜಾರಿದೆ
ಹರಿವ ಹನಿಯ ಉತ್ತರಕೆ
ಜೀವ ಜಗವೆ ಪ್ರಶ್ನೆಯಾಗಿದೆ
ನೀನು ಮುಗಿಲು ನಾನು ನೆಲ
ಎನುವ ಭ್ರಮೆ ಕಳಚಿದೆ…
ಶಾರು
Beautifully written