ಮೀನಾಕ್ಷಿ ಸುರೇಶ್ ಭಾಂಗಿಸೂಡಿ-ಶರಣ ಸಾಹಿತ್ಯ ವಿಶ್ವ ದೀಪ.

ಕಾವ್ಯ ಸಂಗಾತಿ

ಮೀನಾಕ್ಷಿ ಸುರೇಶ್ ಭಾಂಗಿಸೂಡಿ

ಶರಣ ಸಾಹಿತ್ಯ ವಿಶ್ವ ದೀಪ.

ಚಿತ್ರಕೃಪೆ- ಗೂಗಲ್

ವಿಶ್ವಮಾನ್ಯತೆಯ ಹೊನ್ನದೀಪವಿದು
ಶರಣು ಶರಣಾರ್ಥಿ ಶರನೆಂಬೆನು,
ಸೊನ್ನಲಿಗ ಸಿದ್ಧ, ಡೋಹಾರ ಕಕ್ಕಯ್ಯ, ಆದಯ್ಯ, ಬಸವಣ್ಣ ,ಮೋಳಿಗೆ ಮಾರಯ್ಯ, ನೀಲಮ್ಮ ,ಅಕ್ಕಮ್ಮ ,ಗಂಗಮ್ಮ ,ಮಸನಮ್ಮ, ಪುಣ್ಯಸ್ತ್ರೀ ಕಾಳವ್ವೆ ,ಗೊಗ್ಗವ್ವೆ,ಎಲ್ಲರೂ ಹೊನ್ನಿನುಂಗುರ ನೀವು ಸಂಗಮನಿಗೆ…

ಶತ ಶತಮಾನಗಳಿಂದಲೂ ಬೆಳಗಿದ
ವಚನಗಳ ದಿವ್ಯ ಬೆಳಕನು ಜಗಕೆ ನೀಡಿ ಜಗಜ್ಯೋತಿಯಾದವರು
ಶರಣ ಸಾಹಿತ್ಯವದು ಶರಧಿಯಂತೆ ಝೇಂಕಾರಿಸೋ ಅಲೆಗಳು
ಆ ಹೊನ್ನ ನುಡಿಗಳು

ಮನುಜ ಮತದ ಮೌಢ್ಯ ಕಳೆದು
ಸರಳ ನೇರ ದೇಸಿ ಸೊಗಡಲಿ
ಕಾಯಕದ ದಾರಿ ತೋರಿದ
ಬದುಕ ತಿರುಳಿನ ದೀಪಗಳು …

ಭಾವ ಬದುಕನು ಹದಗೊಳಿಸುವ ಜೆನ್ನುಡಿ
ಸಾಟಿ ಯಾವುದು ಈ ನಕ್ಷತ್ರಗಳ ಬೆಳಕಿಗೆ? ವಿಶ್ವದೀಪವಿದು ವಚನಾಮೃತ
ಶರಣು ಶರಣುಂಬೆ ನಾ
ಕೋಟಿ ವಚನಕಾರರಿಗೆ..


ಮೀನಾಕ್ಷಿ ಸುರೇಶ್ ಭಾಂಗಿಸೂಡಿ.

Leave a Reply

Back To Top