ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಜಾತ ಮಂಜುನಾಥ್

ಸ್ನೇಹದ ಸವಿ ತಿರುಳು

ಮೊಳಕೆಯಾಗಿ ಹೊಡೆದ ಸ್ನೇಹ
ಹೆಮ್ಮರವಾಗಿ ಬೆಳೆಯಿತು
ಮೊಗ್ಗಾಗಿ ಮೂಡಿದ ಸ್ನೇಹ
ಹೂವಾಗಿ ಅರಳಿತು
ಗೊತ್ತಿಲ್ಲದೆ ಬಂದ ಸ್ನೇಹ
ಅಚ್ಚಳಿಯದೇ ಉಳಿಯಿತು// //

ಪ್ರಾತಃಕಾಲ ರವಿಯ ಆಗಮನವಾದಾಗ
ಇಬ್ಬನಿಯು ಹೂವನ್ನು ಚುಂಬಿಸಿದಾಗ
ಹಕ್ಕಿಗಳ ಚಿಲಿಪಿಲಿ ಧ್ವನಿ ಕೇಳಿದಾಗ
ಸೂರ್ಯರಶ್ಮಿ ಗಂಗೆಯ ಸ್ಪರ್ಶಿಸಿದಾಗ
ನೆನಪಾಗುವುದೇ ನಿನ್ನ ನನ್ನ
ಅನುದಿನದ ಅಪಾರವಾದ ಸ್ನೇಹ// //

ಮುಚ್ಚಿಟ್ಟ ಭಾವನೆಗಳಲಿ
ಕಟ್ಟಿಟ್ಟ ಕನಸುಗಳಲಿ
ಹವಳದಂತ ಪ್ರೀತಿಯ ತೆನೆಯಲಿ
ಮೈಮರೆತು ಯೋಚಿಸಿದಾಗ
ನೆನಪಾಗುವುದೇ ನಿನ್ನ ನನ್ನ
ನಿಷ್ಕಲ್ಮಶವಾದ ಸ್ನೇಹ// //

ಕಷ್ಟಕ್ಕೆ ಸ್ಪಂದಿಸುವ ಸ್ನೇಹ
ಎಳ್ಳಷ್ಟು ದ್ರೋಹವಿರದ ಸ್ನೇಹ
ನೋವಿಗೆ ಕೈಜೋಡಿಸುವ ಸ್ನೇಹ
ನೊಂದಾಗ ಸಾಂತ್ವಾನ ಹೇಳಿ ಸಮಾಧಾನ ತೋರುವ ಸ್ನೇಹ
ನೋವ ಮರೆಸಿ ನಗೆಯ ಮಂದಹಾಸ ಬಿಂಬಿಸುವ ಸ್ನೇಹ
ಮರೆಯದೆ ಅಚ್ಚಳಿಯದೆ ಉಳಿಯುವ ನಿಜವಾದ ಸ್ನೇಹ// //


ಸುಜಾತ ಮಂಜುನಾಥ್


About The Author

Leave a Reply

You cannot copy content of this page

Scroll to Top