ನಳಿನಾ ದ್ವಾರಕನಾಥ್ ಕವಿತೆ-ನಿನ್ನನೆನೆಯುವಪ್ರತಿಕ್ಷಣ

ಕಾವ್ಯ ಸಂಗಾತಿ

ನಳಿನಾ ದ್ವಾರಕನಾಥ್

ನಿನ್ನ ನೆನೆಯುವ ಪ್ರತಿಕ್ಷಣ

ನಿನ್ನ ನೆನೆಯುವ ಪ್ರತಿಕ್ಷಣ
ಮನದಲ್ಲೇನೇನೋ ತಲ್ಲಣ
ಮಾಡಲದನು ಅನಾವರಣ
ಹೃದಯವೇ ನೆಮ್ಮದಿ ತಾಣ

ಬಳಿ ಬಂದು ನೀ ನಗಲು
ಸವಿ ಜೇನಿನ ಹೊನಲು
ಮಧುರ ನೆನಪಿನ ಅಮಲು
ಸೇರಿದೆ ಸಂತಸದ ಕಡಲು

ನಿನ್ನ ಕಣ್ಣಂಚಿನ ನೋಟ
ಕಾಡಿಸಿದೆ ದಿನವಿಡೀ ಆಟ
ನಿನ್ನ ಸಾಂಗತ್ಯದ ಮಾಟ
ನೆನಪಿಸಿದೆ ಆ ತುಂಟಾಟ


ನಳಿನಾ_ದ್ವಾರಕನಾಥ್

Leave a Reply

Back To Top