ಕಾವ್ಯ ಯಾನ
ಬಾಗೇಪಲ್ಲಿ
ಗಜಲ್
ಇಂದಿನೊಂದು ಕೆಟ್ಟ ಅನುಭವದಿಂದ ಅರಿವಿಗೆ ಬಂದದ್ದು “ನಿನ್ನಂತೆ ನೀನಿರು”
ಈ ಪದ ಪಂಜ ಬಹಳಕಾಡಿ ರದೀಫ್ ಆಗಿ ಮೂಡಿದೆ, ಕಾಫಿಯಾ ಹೊಂದಿಸಿರುವಿರಿ ಎಂದರೂ ನಾ ಬೇಸರಿಸೆ.
ಎಲ್ಲ ಬಲ್ಲವರಿಲ್ಲಿಲ್ಲ ನಿನ್ನಂತೆ ನೀನಿರು
ಬಲ್ಲವರು ಬಹಳಿಲ್ಲ ನಿನ್ನಂತೆ ನೀನಿರು
ಲೋಕೋ ಭಿನ್ನ ರುಚಿಹಿಃ ಎಂದಿಹರು
ವಿಧಿಯೂ ತಿಳಿದಿಲ್ಲ ನಿನ್ನಂತೆ ನೀನಿರು
ಲೋಕದ ಡೊಂಕನು ನೀ ತಿದ್ದಲಾಗದು
ಭೂಮಿ ಗುಂಡಗಿಲ್ಲ ನಿನ್ನಂತೆ ನೀನಿರು
ನಿನ್ನ ನಂಬಿಕೆ ನಿನಗೆ ಪರರದ್ದು ಗೌರವಿಸು
ನಾನಿನಗೆ ಭೋದಿಸುತ್ತಿಲ್ಲ ನಿನ್ನಂತೆ ನೀನಿರು
ಆರಿವಿಗೆ ಬಂದುದ ಜಗಕೆ ಹೇಳಿಹೆ ಅಷ್ಟೇ
ಹಂಚದಿರೆ ಲೋಪವಿಲ್ಲ ನಿನ್ನಂತೆ ನೀನಿರು
ಕೃಷ್ಣಾ! ತೃಣಮಾತ್ರ ನಾ ಸಮಷ್ಠಿಯ ಭಾಗ
ತಾರತಮ್ಯ ಭುವಿಗಿಲ್ಲ ನಿನ್ನಂತೆ ನೀನಿರು.
ಬಾಗೇಪಲ್ಲಿ