ಡಾ ಶಶಿಕಾಂತ ಪಟ್ಟಣ- ರಾಮದುರ್ಗಅಕ್ಕ ಮಹಾದೇವಿ ಮದುವೆ ಆಗಿದ್ದಳೋ ಇಲ್ಲವೋ ಅನಗತ್ಯ ಚರ್ಚೆ.

ವಿಶೇಷ ಲೇಖನ

ಅಕ್ಕ ಮಹಾದೇವಿ ಮದುವೆ ಆಗಿದ್ದಳೋ ಇಲ್ಲವೋ ಅನಗತ್ಯ ಚರ್ಚೆ.

ಡಾ.ಶಶಿಕಾಂತ.ಪಟ್ಟಣ.ಪೂನಾ

ಕರ್ನಾಟಕವು ಮತ್ತು ಭಾರತ ಭೂಖಂಡವು ಎಂದೆಂದೂ   ಕಾಣರಿಯದ ಶ್ರೇಷ್ಟ ವೀರಾಗಿಣಿ ,ವೈರಾಗ್ಯ ಜ್ಞಾನದ ಖನಿಜ ,ಅನುಭಾವ ಅನುಭೂತಿಯ ಆಗರ , ಶರಣ ಸಂಕುಲದ  ದಿಟ್ಟ ಶರಣೆ  ಅಕ್ಕ ಮಹಾದೇವಿ .    
  ಅಕ್ಕ ಹುಟ್ಟಿದ್ದು ಇಂದಿನ ಶಿವಮೊಗ್ಗೆ ಜಿಲ್ಲೆಯ ಉಡತಡಿ   ಗ್ರಾಮದಲ್ಲಿ ನಿರ್ಮಲ ಸುಮತಿಯರ ಗರ್ಭದಲ್ಲಿ ಜನಿಸಿದಳು . ಬಾಲ್ಯದಿಂದಲೂ ವೈರಾಗ್ಯದ ಖನಿಜವಾದ ಅಕ್ಕ ತಾನು ಆರಾಧಿಸುವ ಚೆನ್ನ ಮಲ್ಲಿಕಾರ್ಜುನ ದೇವನೆ ತನ್ನ  ಪತಿ  ಎಂದು ನಂಬಿದ್ದಳು .ಮುಂದೆ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟ ಈ ರೂಪವತಿ ತಾನು ತನ್ನ ಅಧ್ಯಯನ ಆಧ್ಯಾತ್ಮದ ಹಸಿವು . ಉಡತಡಿ ಇದನ್ನು ಕೌಶಿಕನೆಂಬ  ರಾಜನು ಆಳುತ್ತಿದ್ದನು .
ಯಾವುದೋ ಸಂದರ್ಭದಲ್ಲಿ ಒಮ್ಮೆ ಅಕ್ಕ ಮಹಾದೇವಿಯನ್ನು ನೋಡಿದನು ,ಅವಳನ್ನೇ ಮದುವೆ ಆಗಲು ನಿರ್ಧರಿಸಿದನು.
 ಅದೇ ರೀತಿ ಅಕ್ಕ ಮಹಾದೇವಿಯ ತಂದೆ ನಿರ್ಮಲ ಶೆಟ್ಟಿ ಮತ್ತು ತಾಯಿ ಸುಮತಿಯರಿಗೆ ಈ ವಿಷಯ ಹೇಳಿ ಕಳಿಸಿದನು. ಇಲ್ಲದಿದ್ದದರೆ ಇವರ ತಂದೆ ತಾಯಿಯವರಿಗೆ ಗಲ್ಲು ಶಿಕ್ಷೆ ವಿಧಿಸುವದಾಗಿ ದೊರೆ ಬೆದರಿಕೆ ಹಾಕಿದನು,ತಂದೆ ತಾಯಿಗಳ ಒತ್ತಾಯ ,ಮಾತು ಸಂದರ್ಭದ ಒತ್ತಡಕ್ಕೆ ಸಿಲುಕಿದ ಅಕ್ಕ ತಾನು ೩ ಷರತ್ತು  ರಾಜನಿಗೆ ವಿಧಿಸಿದಳು ಅವುಗಳಲ್ಲಿ ಯಾವುದೇ  ಯಾವುದಾದರು ಷರತ್ತು  ರಾಜನು ಮೀರಿದರೆ  ತನು ರಾಜನನ್ನು ಒಪ್ಪುವದಿಲ್ಲ ಅಂತ ಹೇಳಿದಾಗ . ರಾಜ ಕೌಶಿಕ ಆಗಲಿ ಎಂದು ಹೇಳಿದನು, ಆದರೆ ಮದುವೆಗೆ  ಅಕ್ಕ ಸಮಯ ಕೇಳಿದಳು.,ಮಹಾದೇವಿ ಮದುವೆ ಆಗಿದ್ದಳು ಎಂದುಕೇವಲ ಮೂರು ಪ್ರಾಚಿನ ಗ್ರಂಥಗಳು ಹೇಳುತ್ತವೆ


೧)ಹರಿಹರ  ದೇವನ    ಉಡತಡಿ ಮಹಾದೇವಿಯಕ್ಕನ ರಗಳೆಗಳು
೨) ಚೆನ್ನಬಸವಾ೦ಕನ  ಮಹಾದೇವಿಯಕ್ಕನ ಪುರಾಣ
೩ ) ಕೆಂಚ ವೀರನ್ನೋಡೆಯರ ಶೂನ್ಯ ಸಂಪಾದನೆ.

ಅವಳು ಮದುವೆ ವಿವಾಹ ವಾಗಿಲ್ಲ ಅಂತ ಹೇಳಲು ಅನೇಕ ಪ್ರಾಚಿನ ಮತ್ತು ಇತ್ತೀಚಿನ ಮಾತಜಿಯವರ ಹೆಪ್ಪಟ್ಟ ಹಾಲು , ತರಂಗಿಣಿ  ಮುಂತಾದ ಕೃತಿಗಳಲ್ಲಿ ಕಂಡು ಬರುತ್ತದೆ .ಅವುಗಳಲ್ಲಿ


 ೧ ) ಚಾಮರಸನ ಪ್ರಭುಲಿಂಗಲೀಲೆ
೨) ವಿರುಪಾಕ್ಷ ಪಂಡಿತ ಕೃತ ಚೆನ್ನಬಸವ ಪುರಾಣ
೩) ಎಳ೦ದೂರು ಹರಿಶ್ವರ ಕೃತ  ಪ್ರಭುದೇವರ ಪುರಾಣ
೪ ) ಪಾಲ್ಗುರಿಕೆ   ಸೋಮನಾಥ ಪುರಾಣ
೫ )ಸಂಸ್ಕೃತ ಪ್ರಭುಲಿಂಗಲೀಲೆ
೬ ) ತೆಲಗು ಮತ್ತು ತಮಿಳು ಪ್ರಭುಲಿಂಗಲೀಲೆ
೭ ) ಹಲಗೆಯ ದೇವರ ಶೂನ್ಯ ಸಂಪಾದನೆ
೮ ) ಗಣ ಭಾಷಿತ ರತ್ನ ಮಾಲೆ


ಅಲ್ಲದೆ ಅತ್ಯಂತ ಸುಂದರವಾಗಿ ರಚಿಸಿದ ಮಾತಾಜಿಯ ಹೆಪ್ಪಟ್ಟ ಹಾಲು ರಾಜ್ಯ ಪ್ರಶಸ್ತಿ ವಿಜೇತ ಕೃತಿ . ಈ ಎಲ್ಲ ಕೃತಿಗಳು ಮಹಾದೇವಿ ಕೇವಲ ಮದುವೆಗೆ ಸಮ್ಮತಿಸಿ ತನ್ನ ಷರತ್ತನ್ನು ಇಟ್ಟಿದ್ದಳು ಎಂದು ಹೇಳುತ್ತವೆ.
 ಹಾಗಿದ್ದರೆ ಆ ಷರತ್ತು ಯಾವವು


೧ ) ಎನ್ನಿಚ್ಚೆಯೋಳು ಶಿವಲಿಂಗಲಿಂಗಪೂಜೆಯೊಳಿಪ್ಪೆ
೨) ಎನ್ನಿಚ್ಚೆಯೋಳು ಮಾಹೇಶ್ವರ ಗೊಷ್ಟಿಯೊಳಿಪ್ಪೆ .
೩ )  ಎನ್ನಿಚ್ಚೆಯೋಳು ಗುರು ಸೇವೆಯೊಳಿಪ್ಪೆ
 ಒಮ್ಮೆ ಅಕ್ಕನು ಶಿವಲಿಂಗ ನೀರತನಾದಗ ಕೌಶಿಕನು ಅಕ್ಕನನ್ನು ವರಿಸಲು ಬಂದಾಗ ,ಇಲ್ಲಿ ಅಪ್ಪುಗೆಯೂ ಇಲ್ಲ ಆಲಿಂಗನವೂ ಇಲ್ಲ

 ಅದಕ್ಕೆ ಮದುವೆಗೆ ಒಲ್ಲದ ಮನಸ್ಸಿನಿ೦ದ  ಒಪ್ಪಿಗೆ   ಸೂಚಿಸಿದ ಅಕ್ಕ ಇದಾನು ಒಪ್ಪದೇ ತಂದೆ ತಾಯಿಗೂ ನೋಯಿಸದೆ ಮನೆಯನ್ನು ಬಿಟ್ಟು ನಡೆದಳು .ಅದನ್ನು ಅಕ್ಕ ಈ ರೀತಿ ಹೇಳಿದ್ದಾಳೆ


ಎಮ್ಮೆಗೊಂದು ಚಿಂತೆ ,ಸಂಮಗಾರಗೊಂದು ಚಿಂತೆ
ಧರ್ಮಿಗೊಂದು ಚಿಂತೆ ,ಕರ್ಮಿಗೊಂದು ಚಿಂತೆ
ಎನಗೆ ಎನ್ನ ಚಿಂತೆ ತನಗೆ ತನ್ನ ಕಾಮದ ಚಿಂತೆ
ಒಲ್ಲೆ ಹೋಗು ಸೆರಗು ಬೀಡು ಮರುಳೆ
ಎನಗೆ ಚೆನ್ನ ಮಲ್ಲಿಕಾರ್ಜುನ ದೇವರು ಒಲಿವರು ಒಲಿಯರೋ   ಎಂಬ ಚಿಂತೆ ?

ಪ್ರಾಪಂಚಿಕ ಬದುಕಿಗೆ ವಿದ್ದಾಯ ಹೇಳಿದ ಅಕ್ಕ ತನ್ನ ವೈರಾಗ್ಯದ ಸಾಧನೆಗೆ ಹೆಜ್ಜೆ ಹಾಕಿದಳು .ತಾನು


 ಅಮೆಧ್ಯದ ಮಡಿಕೆ ಮೂತ್ರದ ಕುಡಿಕೆ
ಎಲುವಿನ ತಡಿಕೆ ಕೀವಿನ ಹದಿಕೆ
ಸುಡಲೀ ದೇಹವ ,ಒಡಲುವಿಡಿದು  ಕೆಡದಿರು
ಚೆನ್ನಮಲ್ಲಿಕಾರ್ಜುನನರಿಯದ ಮರುಳೆ  .


ತನ್ನ ಶರೀರ ಹೊಲಸು ತುಂಬಿದ ಮಡಿಕೆ ಮತ್ತು ತಾನು ವ್ಯಕ್ತಿಯಾಗಿ ಬರಿ ಎಲವು ಮಾ೦ಸದ ತಡಿಕೆ ಇಂತಹ ಬಾಹ್ಯ ಶರೀರಕ್ಕೆ ಆಕರ್ಷಿತನಾಗದೆ ದೇವನನ್ನು ಅರಿಯುವ ಮಾರ್ಗ ಕಂಡು ಕೊಳ್ಳಲು ಮಹಾದೇವಿ ಸಲಹೆ ಸೂಚನೆ ನೀಡಿ ,ತನ್ನ ದೇಹದ ಮೋಹವ ಕಡಿದು ಕೊಂಡು  ಬೆತ್ತಲೆಯಾಗಿ ತನ್ನ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಅಕ್ಕ  ಕಲ್ಯಾಣದತ್ತ ಹೆಜ್ಜೆ ಹಾಕುವಳು .
 ದಟ್ಟವಾದ ಅರಣ್ಯ ಯೌವನದ ಬಾಲೆ ತಂದೆ ತಾಯಿಯರಿಗೆ ಸಖಿಯರಿಗೆ ನೋವು .ಇವರೆಲ್ಲರಿಗೂ ತಾನು ಚೆನ್ನಮಲ್ಲಿಕರ್ಜುನನ್ನು ಕಾಣುವೆನೆಂದು ಹೋಗುವಳು .

ಅಳಿಸಂಕುಲವೆ ಮಾಮರವೆ ಬೆಳುದಿಂಗಳೇ ,ಕೋಗಿಲೆಯೇ
ನಿಮ್ಮೆಲ್ಲರನೂ ಒಂದು ಬೇಡುವೆನು .
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವ ಕಂಡರೆ ಕರೆದು ತೋರಿರೆ.
 ಅಳಿಲು ಕೋಗಿಲೆ ಮರ ಪಕ್ಷಿ ಬೆಳುದಿಂಗಳು ಎಲ್ಲ ಚರಾ ಚರ ಜೀವೆಗಳನ್ನು ಕೈ ಮುಗಿದು  ಅಕ್ಕ ಚೆನ್ನ ಮಲ್ಲಿಕಾರ್ಜುನನ ಕಾಣುವ ತವಕದಿ೦ದ  ನಡೆಯುತ್ತಾಳೆ.
ಅಲ್ಲದೆ ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವಾ
ನಿಮ ನಿಮಗೆಲ್ಲ ಶೃಂಗಾರ ಮಾಡಿಕೊಳ್ಳಿ
ಚೆನ್ನ ಮಲ್ಲಿಕರ್ಜುನನಿಗಳೇ ಬಂದಿಹನು
ಇದಿರುಗೊಳ್ಳಿ ಬನ್ನಿರವ್ವಗಳಿರಾ .
ಎಂತಹ ದೃಢ ನಿರ್ಧಾರ ಅಕ್ಕನದು .

ಅಕ್ಕ ತನ್ನ ಮದುವೆಯನ್ನು ಯಾವ ರೀತಿಯಲ್ಲಿ ಹೇಳಿದ್ದಾಳೆ ಎನ್ನುವದನ್ನು ಇಲ್ಲಿ ಸ್ವಲ್ಪ ನೋಡೋಣ

ಕಾಮನ ತೆಲೆಯ ಕೊರೆದು ,ಕಾಲನಕಣ್ಣ ಕಳೆದು
ಸೋಮ ಸೂರ್ಯರ ಹುರಿದು ಹುಡಿ ಮಾಡಿ
ನಾಮವನಿಡಬಲ್ಲವರಾರು ಹೇಳಿರೆ
ನೀ ಮದುವಲಿಗನಾಗೆ ನಾ ಮದುವಳಗಿತ್ತಿಯಾಗೆ
ಶ್ರೀ ಗಿರಿ ಚೆನ್ನಮಲ್ಲಿಕಾರ್ಜುನ  


ಅಕ್ಕ ದೇವನನ್ನು ಶೋಧಿಸುತ್ತ ಅರಸುತ್ತ ಕಲ್ಯಾಣಕ್ಕೆ ಬರುವಳು .ಅಲ್ಲಿಯೂ ಕಿನ್ನರಿ ಬ್ರಹ್ಮಯ್ಯ ಪರೀಕ್ಷೆ ಮಾಡುತ್ತಾನೆ .ಆದರೆ ಅದು ಕೇವಲ ಮೌಕಿಕ ಮತ್ತು ತಾತ್ವಿಕ ವಾಗ್ವಾದ ಚರ್ಚೆ . ಇದನ್ನು ಕೆಲ ಕಿಡಿಗೇಡಿ ಸ್ವಾಮಿಗಳು ನಾಡಿನ ಪ್ರತಿಷ್ಟಿತ ಜಗದ್ಗುರು ಏನೇನೋ ಕಲ್ಪಿಸಿ ಅಕ್ಕನ  ಮಾನ ಹರಣಕ್ಕೆ ಮುಂದಾಗಿದ್ದಾರೆ .
ಕಲ್ಯಾಣದಲ್ಲಿ ಬಂದ ಅಕ್ಕ- ಗುರುವ ಕಂಡೆ ಲಿಂಗವ ಕಂಡೆ ಜಂಗಮ ಕಂಡೆ ಪ್ರಸಾದವ ಕಂಡೆ  ಎಂದು
ಹೇಳುತ್ತಾ

ಬಸವಣ್ಣನೆ ಗುರು ಪ್ರಭುದೆವರೆ ಲಿಂಗ ಸಿದ್ದರಾಮನೆ ಜಂಗಮ
ಮಡಿವಾಳನೆ ಜಂಗಮ ,ಚೆನ್ನ ಬಸವನ್ನೆನ್ನ ಆರಾಧ್ಯರು .
ಇನ್ನು ಸುಖಿಯದೆನು ಕಾಣಾ
ಚೆನ್ನಮಲ್ಲಿಕರ್ಜುನಯ್ಯ


ಎಂದು ಹೇಳಿ ಅಕ್ಕ ಕಲ್ಯಾಣದ ಆದರದ ಗೌರವದ ಪ್ರತೀಕವಾಗುತ್ತಾಳೆ .ಅಕ್ಕನ ಆಗಮನ ಕಲ್ಯಾಣ ಕ್ರಾಂತಿಯ ಅರಿವಿಗೆ ಆಚಾರಕ್ಕೆ ಶಕ್ತಿ ಕಾಯವಾದಳು .
ಅಕ್ಕ ಮಹಾದೇವಿ ತನ್ನ ಲಿಂಗಾಂಗ ಸಾಮರಸ್ಯ ಜಂಗಮತತ್ವ ಅರಿತು ಕದಳಿಯ ಕತ್ತಲೆಯೊಳಗೆ ಬೆಳಕಾಗಲು ಮುಂದಾಗುತ್ತಾಳೆ .
ಆಗ ಅಕ್ಕ ಈ ರೀತಿ ಹೇಳಿದ್ದಾಳೆ


ಲಿಂಗವೆನ್ನೇ ಲಿಂಗೈಕ್ಯವೆನ್ನೆ,ಸಂಗವೆನ್ನೇ ಸಮರಸವೆನ್ನೇ
ಆಯಿತೆನ್ನೇ ,ಆಗದೆನ್ನೇ ,ನೀನೆನ್ನೆ ,ನಾನೆನ್ನೇ
ಚೆನ್ನಮಲ್ಲಿಕಾರ್ಜುನಯ್ಯ.
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ.


ಮಲ್ಲಿಕಾರ್ಜುನನನ್ನು ಹುಡುಕುತ್ತ ಹೊರಟ  ಅಕ್ಕ ಮಹಾದೇವಿ ಕೊನೆಗೆ ತಾನೇ ಚೆನ್ನ ಮಲ್ಲಿಮಲ್ಲಿಕಾರ್ಜುನನಾಗುತ್ತಳೆ. ಶರಣರ ಉದಾತ್ತಿಕರಣದ ಕಲ್ಪನೆ ಶ್ರೇಷ್ಠ ಮಟ್ಟದ್ದು ಅಕ್ಕ ಆ ಉದಾತ್ತಿಕರಣದ ಸಾರ ಅಂದ್ರೆ ತಪ್ಪಾಗಲಾರದು.

ಇನ್ನು ಲೌಕಿಕ ಅಲೌಕಿಕ ಗಂಡ ಎನ್ನುವ ಪ್ರಸ್ತಾಪ ಮಾಡುವ ಅಕ್ಕ “ಸಾವಿಲ್ಲದ ರೂಹಿಲ್ಲದ ಕೇಡಿಲ್ಲದ ಗಂಡಗೆ ಒಲಿದವಳಾಗಿ” ಎಂದು ಹೇಳಿಕೊಂಡಿದ್ದಾಳೆ.ಸಾಯುವ ಗಂಡನು ಒಯ್ದು ಒಲೆಯಾಳಗಿಕ್ಕೂ ಎನ್ನುವ ಅಕ್ಕನ  ಸಾತ್ವಿಕ ಆಕ್ರೋಶ ನೋಡಿದರೆ ಅವಳು ಮದುವೆ ಆಗಿರಲಿಲ್ಲ ಎನ್ನುವುದು ಖಚಿತ ಪಡುತ್ತದೆ.
ಅದು ಏನೇ ಇರಲಿ ಇಂತಹ ವಿಷಯಗಳು ವಚನಾಸಕ್ತರಿಗೆ ಮುಖ್ಯವಾಗಬಾರದು.ಅಕ್ಕನ ಅರಿವು ಜ್ಞಾನ ವೈರಾಗ್ಯ ದಿಟ್ಟತನ ನಮಗೆ ಮಾದರಿಯಾಗಬೇಕು.
——————————————————-

ಡಾ.ಶಶಿಕಾಂತ.ಪಟ್ಟಣ.ಪೂನಾ

3 thoughts on “ಡಾ ಶಶಿಕಾಂತ ಪಟ್ಟಣ- ರಾಮದುರ್ಗಅಕ್ಕ ಮಹಾದೇವಿ ಮದುವೆ ಆಗಿದ್ದಳೋ ಇಲ್ಲವೋ ಅನಗತ್ಯ ಚರ್ಚೆ.

  1. ಅರ್ಥಪೂರ್ಣ ಚಿಂತನೆ ನಡೆಸಿದೆ ಸರ್ ನಿಮಗೆ ಅನಂತ ಶರಣು

Leave a Reply

Back To Top