ಹಮೀದಾ ಬೇಗಂ ದೇಸಾಯಿ ಕವಿತೆ-ನಾನೆಷ್ಟು ಕುಬ್ಜ…

ಕಾವ್ಯ ಸಂಗಾತಿ

ನಾನೆಷ್ಟು ಕುಬ್ಜ…

ಹಮೀದಾ ಬೇಗಂ ದೇಸಾಯಿ

ಏನೀ ಅದ್ಭುತ ಸೃಷ್ಟಿಯು
ದೇವನ ಲೀಲೆಯು, ವಿಸ್ಮಯವು
ಎತ್ತರದೆತ್ತರ ಅಂಬರಕೆತ್ತರ
ಬಿತ್ತರಿಸುವ ಚಿತ್ತಾರದ ಸಿರಿಯು..

ದೇವನ ಕ್ಯಾನ್ವಾಸ್ ಇದೇನೋ
ಬಿಡಿಸಿದ ಚಿತ್ರಗಳೇಸೋ..
ಆದಿ -ಅಂತ್ಯಗಳ ಲೆಕ್ಕವಿದೇನೋ
ಅನಂತ ಲೋಕದ ದೃಶ್ಯವಿದೇನೋ..

ಮಿನುಗುವ ತಾರೆಗಳೆಷ್ಟೋ
ಹೊಳೆವ ಹಾಲ್ದಾರಿಗಳೆಷ್ಟೋ
ನಿಗೂಢ ಅಂತರಿಕ್ಷದೊಳು
ಅಡಗಿಹ ವೈಚಿತ್ರ್ಯಗಳೆಷ್ಟೋ..

ಮರಗಳು ನಡೆಸುತ ಪೈಪೋಟಿಯ
ಏರಿವೆ ಗಗನವ ಮುತ್ತಿಡಲು
ಅರಿವಾದುದು ನನಗಾಗಲೇ ಮನಕೆ
ಎಷ್ಟು ಕುಬ್ಜ ನಾ ಈ ಜಗಕೆ…!


ಹಮೀದಾ ಬೇಗಂ ದೇಸಾಯಿ

3 thoughts on “ಹಮೀದಾ ಬೇಗಂ ದೇಸಾಯಿ ಕವಿತೆ-ನಾನೆಷ್ಟು ಕುಬ್ಜ…

  1. ಸೃಷ್ಟಿಯ ಮಾಯೆಯೆದುರು ಮಾನವನ ಕುಬ್ಜತೆಯನು ಅರ್ಥಪೂರ್ಣವಾಗಿ ಬಿಂಬಿಸಿದ ಪರಿ ಸೊಗಸಾಗಿದೆ.

  2. ಧನ್ಯವಾದಗಳು ಸ್ಪಂದನೆಗೆ

    ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top