ಕಾವ್ಯ ಸಂಗಾತಿ
ಇಂದಿರಾ.ಕೆ
ನಿನ್ನ ವಿನಃ
ಕಣ್ಣಾಲಿಗಳು ಓದುತ್ತಿವೆ
ಗೀಚಲಾರದ ಬರಹ
ಮೆಲು – ಮೆಲ್ಲನೆ ಇಣುಕುತ್ತಿವೆ
ಮರೆಯಾದ ನೆನಪುಗಳು ಪುನಃ ಪುನಃ…
ಒಂಟಿತನವು ಬಯಸುತ್ತಿವೆ
ಏಕಾಂತದ ಸನಿಹ
ಹುದುಗಿಟ್ಟ ಹಸಿಯಾದ
ಕನಸುಗಳು ನೂರು ನೂರು ತರಹ…
ಈ ಸಂಜೆ ಸರಿಯುತ್ತಿದೆ
ಒಳಗೊಳಗೆ ಸಂದೇಹ
ಮತ್ತಾರು ಜೊತೆಯಾಗರು
ಈ ಜೀವಕೆ ನಿನ್ನ ವಿನಃ….
ಇಂದಿರಾ.ಕೆ
ಇದು ಹಾಗೆ ನೋಡಿ, ಪುನಃ ಪುನಃ ಬೇಕಾದವರ ಸನಿಹವನ್ನು ಮನಸು ಬಯಸುತ್ತಲೇ ಇರುತ್ತದೆ. ಒಂಟಿತನ ಸಹಜವಾಗಿಯೇ ನೆನಪುಗಳನ್ನು ಹೆಕ್ಕಿ ಹೆಕ್ಕಿ ತರುತ್ತದೆ. ಈ ವಿರಹದ ಗೀಚಲಾರದ ಬರಹದ ಅಂತ್ಯವೇ ಸನಿಹ.. ಜತೆಗಾರರು.. ಒಳ್ಳೆಯ ಕವಿತೆ ರಿ