ಡಾ ಅನ್ನಪೂರ್ಣ ಹಿರೇಮಠ-ಫೇಸ್ ಬುಕ್ ಅಂಗಳದಲ್ಲಿನ ಪ್ರಯೋಜನಗಳುಮತ್ತು ಸಮಸ್ಯೆಗಳು

ವಿಶೇಷಲೇಖನ

ಡಾ ಅನ್ನಪೂರ್ಣ ಹಿರೇಮಠ

ಫೇಸ್ ಬುಕ್ ಅಂಗಳದಲ್ಲಿನ

ಪ್ರಯೋಜನಗಳುಮತ್ತು ಸಮಸ್ಯೆಗಳು

ವಿಷಯ ಫೇಸ್ಬುಕ್ ಅಂಗಳದಲ್ಲಿ ನಾನು ಎದುರಿಸಿದ ಸಮಸ್ಯೆಗಳು ಅಥವಾ ,ನಮಗಾದ ಉಪಯೋಗಗಳು

ಫೇಸ್ಬುಕ್ ಎಂಬ ಅಂಗಳ ಆಧುನಿಕತೆಯ ಭರಾಟೆಯಲ್ಲಿ ಬಲು ಮೋಹಕತೆಯನ್ನು ತೋರುತ ಒನಪು ವಯ್ಯಾರ ಗಳ ಬೀರುತ ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವುದು ನಿಜ. ನಾವೆಲ್ಲ ಕಂಡ ಸತ್ಯದ ವಿಷಯ ದೇಶ-ವಿದೇಶಗಳಲ್ಲಿ ವಾಸಿಸುವವರಿಗೆ ಸಂಬಂಧ ಕುದುರಿಸಿ ಪ್ರೀತಿ ಬೆಸೆಯುವಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಹುಟ್ಟಿಕೊಂಡ ಈ ಅಂಗಳ ಎಲ್ಲರ ಒಟ್ಟುಗೂಡಿಸುವ ಒಂದು ಸುಂದರ ತಾಣವಾಗಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರು ಫೇಸ್ಬುಕ್ನಲ್ಲಿ ಆಟಗಾರರು, ಭಾವಗಳ ಹಂಚಿಕೊಳ್ಳುತ್ತಾ, ಅನೇಕ ಮಜಲುಗಳಲ್ಲಿ ತನ್ನ ಬಾಹುವನ್ನು ವಿಶಾಲವಾಗಿ ಚಾಚಿ ಜಗತ್ತನ್ನು ತನ್ನ ಅಪ್ಪುಗೆಯಲ್ಲಿ ಇಟ್ಟುಕೊಂಡಿದೆ .ವಿಚಾರಗಳ ವಿನಿಮಯಿಸಿ ಇದು ಮಾನವ ವಿಚಾರಗಳ ಪ್ರಗತಿ ಪಥ ಕೂಡ ಎಂದು ಹೇಳಬಹುದು. ಗೊತ್ತಿಲ್ಲದ ಮುಖಗಳ ಪರಿಚಯಿಸಿಕೊಳ್ಳುತ್ತಾ, ಎಂದೂ ಭೇಟಿಯಾಗದ ವ್ಯಕ್ತಿಯ ಜೊತೆ ಸೇರಿಸುತ್ತಾ, ವ್ಯಕ್ತಿಗಳ, ಸಂಬಂಧಿಕರ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಫೇಸ್ಬುಕ್ ಅಂಗಳ ಮಾಡುತ್ತಿದೆ. ಸಂತೋಷ ,ಆಶ್ಚರ್ಯ, ಸಂದಿಗ್ಧತೆಯ ಸಂದರ್ಭಗಳನ್ನು ಹುಟ್ಟುಹಾಕಿದೆ. ಈ ಅಂಗಳ ವಿಶಾಲವಾದ ಸಮುದ್ರದಂದದ ಒಂದು ಜಾಲತಾಣ. ಇದರ ವಿಸ್ತಾರ ವ್ಯಾಪ್ತಿ ತುಂಬಾ ದೊಡ್ಡದು.

ಇದೊಂದು ಜನುಮನಗಳ ಸೇರಿಸುವ ಸುಂದರ ತಾಣ. ವಿಭಿನ್ನ ಗತಿಗಳ ಒಗ್ಗೂಡಿಸುವ ಹೊಸ ಆಯಾಮ. ಹೊಸ ಚೈತನ್ಯ ತುಂಬಿ ಹೊಸ ಹೊಸ ಅನುಭವಗಳ ನೀಡಿ ವಿಶಾಲ ಮನೋಭಾವ ಬಿತ್ತಿದಂತೆ ನನಗಾಗಿರುವುದು ನಿಜ. ಒಂಟಿ ಎನ್ನುವವರಿಗೆ ಗೆಳೆಯ-ಗೆಳತಿಯರು ಸಿಗುವುದರಿಂದ ಏನೋ ನೆಮ್ಮದಿ ಕೊಡುವುದು ನಿಜ. ಕೆಲವೊಮ್ಮೆ ನಮ್ಮ ಎಣಿಕೆ ತಪ್ಪಾಗಿ ಕೆಟ್ಟ ವ್ಯಕ್ತಿಗಳ ಪರಿಚಯದಿಂದ ಕಿರಿಕಿರಿಯುಂಟು ಮಾಡಿದೆ.ಹಲವು ತೊಂದರೆ ಇರಬಹುದು. ಆದರೆ ಪ್ರಯೋಜನೆಗಳೇ ಹೆಚ್ಚು. ನಾವು ಹದವರಿತು ಹಿತ ಮಿತವಾಗಿ ಬಳಸಿದರೆ ತೊಂದರೆಯಾಗಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.

ಜ್ಞಾನದ ಹರವು ಹೆಚ್ಚಿಸುತ್ತದೆ ,ಹೊಸ ಹೊಸ ಸಂಬಂಧಗಳ ಕುದುರಿಸುತ್ತದೆ, ಸಂತೋಷ ನೆಮ್ಮದಿ ನೀಡುತ್ತದೆ. ದೇಶ-ವಿದೇಶಗಳ ಜನರ ಪರಿಚಯಿಸಿ, ಜಗತ್ತಿಗೆ ಹತ್ತು ಹಲವು ವಿಶೇಷ ಪ್ರತಿಭೆಗಳು ಪರಿಚಯಿಸುವುದರೊಂದಿಗೆ ಮೆಚ್ಚುಗೆಗೆ ಪಾತ್ರವಾಗಿದೆ. ಹಲವು ವಿಭಿನ್ನತೆಗಳ ಹೊರಹಾಕಲು ವೇದಿಕೆಯಾಗಿದೆ. ಎಲ್ಲರ ನಿಜ ಪ್ರತಿಭೆಗಳ ಸುಂದರ ಜಾಲತಾಣವಿದಾಗಿದೆ. ಜಾಣರ ಜಗಲಿಯಂತೆ ಕಾರ್ಯನಿರ್ವಹಿಸುತ್ತ. ಎಲ್ಲರನ್ನೂ ಒಗ್ಗೂಡಿಸುವ ಒಳ್ಳೆಯ ಕಾರ್ಯ ಮಾಡುತ್ತಾ ಸಾಗಿದೆ. ಅನುಕೂಲಗಳೆ, ಉಪಯೋಗಗಳೆ ಹೆಚ್ಚಿವೆ. ಅದನ್ನು ಉಪಯೋಗಿಸುವವರ ಮೇಲೆ ಅದರ ಸದ್ಬಳಕೆ, ದುರ್ಬಳಕೆ ಅವಲಂಬಿತವಾಗಿದೆ.


ಡಾ ಅನ್ನಪೂರ್ಣ ಹಿರೇಮಠ

4 thoughts on “ಡಾ ಅನ್ನಪೂರ್ಣ ಹಿರೇಮಠ-ಫೇಸ್ ಬುಕ್ ಅಂಗಳದಲ್ಲಿನ ಪ್ರಯೋಜನಗಳುಮತ್ತು ಸಮಸ್ಯೆಗಳು

  1. ನಿಜಕ್ಕೂ ತಮ್ಮಯ ಈ ಬರಹ ಹೊಸದಾದ ಅನುಭವದ ಅಂಗಳದಲ್ಲಿ ನಡೆದಾಡಿದಂತೆ ಭಾಸವಾಗುತ್ತಿದೆ, ತಾವು ಉಪಯೋಗ ಮಡಿಕೊಂಡ ಬಗೆ ಅದ್ಬುತ ತಮ್ಮಯ ಈ ನಡೆ ಎಲ್ಲರಿಗೂ ಮಾದರಿ

  2. ತಮ್ಮ ಅಭಿಪ್ರಾಯ ಸರಿಯಾಗಿದೆ ಫೇಸ್ಬುಕ್ ಅನ್ನು ಉಪಯೋಗಿಸುವರ ಮೇಲೆ ಅದರ ಉಪಯೋಗ ಅವಲಂಬಿತವಾಗಿದೆ

  3. ನಿಜ, ನೌಕರಿ ಓದು ಅದು ಇದು ಎಂದು ಕುಟುಂಬ ಮತ್ತು ಆಪ್ತ ಮಿತ್ರರಿಂದ ದೂರ ಇರಬೇಕಾದ ಇಂದಿನ ಬದುಕಿನಲ್ಲಿ ಸಾಮಾಜಿಕ ಜಾಲತಾಣಗಳು ಮನುಜನ ಒಂಟಿತನ ದೂರಮಾಡಲು ಇರುವ ಸುಂದರ ತಾಣ. ಇದನ್ನು ನಾವು ಹೇಗೆ ನಮ್ಮನ್ನು ಭೌತಿಕವಾಗಿ ಭಾವನಾತ್ಮಕವಾಗಿ ಉತ್ತಮ ಪಡಿಸಿಕೊಳ್ಳಲು ಬಳಸುತ್ತೇವೆ ಎನ್ನುವುದು ನಮ್ಮ ಮೇಲೆ ಅವಲಂಬಿಸಿದೆ. ಪ್ರಸ್ತುತ ವಿಷಯದ ಮೇಲೆ ಉತ್ತಮ ಲೇಖನ ಡಾ. ಅನ್ನಪೂರ್ಣಾವರೆ

Leave a Reply

Back To Top