ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕವನದ ಕನಸು

ಲಲಿತಾ ಪ್ರಭು ಅಂಗಡಿ

ನನ ಕವನಕೆ ಒಂದು ಕನಸು
ಅದಕೇನೊ ಹೊಸತನದ ಸೊಗಸು
ಕನಸೆಂಬ ಕವಿತೆ ಗರ್ಭಧರಿಸಿ
ಶಬ್ದಗಳಿಗೆ ಜನುಮ ನೀಡಿ

ಪದಗಳ ಓಂಕಾರಕೆ ಸ್ವರಕೂಡಿ
ವಾಕ್ಯಗಳ ತೋರಣಕೆ ಬಳ್ಳಿಯಾಗಿ
ಭಾವನೆಯ ಬೆಸುಗೆಗೆ ತೊಟ್ಟಿಲಾಗಿ
ಕಾವ್ಯದೊಲುಮೆಗೆ ಆಸರೆಯಾಗಿ

ಆತ್ಮೀಯ ಅನುಬಂಧಕೆ
ಅಂಬೆಗಾಲಿಡುವ ಆತುರ
ಮುದ್ದು ಮಾಡಿ ಹಾರೈಸಿ
ನಡೆದಾಡುವ ಭರವಸೆ

ಪ್ರೀತಿಯ ತೊಡಿಗೆ ಉಡಿಸಿ
ಶ್ರೃಂಗಾರದಿ ಮೆರೆವ ಬಯಕೆ
ಮನಕೆ ತಂಪನಿಟ್ಟು ತಣಿಸಿ
ಮಮತೆಯಿಂದ ಎಲ್ಲರೊಳ್ ಬೆರೆವ ಆಸೆ


ಲಲಿತಾ ಪ್ರಭು ಅಂಗಡಿ

About The Author

Leave a Reply

You cannot copy content of this page

Scroll to Top