ರಂಗಸ್ವಾಮಿ ಮಾರ್ಲಬಂಡಿ ಕವಿತೆ-ನೀನೇನಿದ್ದರೂ ಜೊತೆಗಾರಳು

ಕಾವ್ಯ ಸಂಗಾತಿ

ನೀನೇನಿದ್ದರೂ ಜೊತೆಗಾರಳು

ರಂಗಸ್ವಾಮಿ ಮಾರ್ಲಬಂಡಿ

ಓ ನನ್ನ ಗೆಳತಿ
ಮನಃ ಸಾಗರದ ಒಡತಿ
ಮನ್ ಮಂತರದಲಿ ಚರ್ಚೆಯೇ ನಿನ್ನ ಆಸ್ತಿ…!

ಅಂತರ್ಯದ ನಿಧಿ
ಸೌಂದರ್ಯದ ಗಣಿ ಎಂದು ನೀ ಭಾವಿಸಬೇಡ.
ಒಲವು ಸಾಕ್ಷಾತ್ಕಾರ ವಾಗಿದೆ ಎಂದು ಅರಸಲೇಬೇಡ…!

ನಾ ನಿನ್ನ ನೋಡುತ್ತಿರುವುದು
ನನ್ನ ಕಣ್ಣಿನ ತೃಪ್ತಿಗೆ
ನಿನ್ನ ಮೈಮಾಟಕ್ಕೆ
ನಿನ್ನ ರೂಪ ಅಪೂರ್ವವಾದದ್ದೇನಲ್ಲ
ಅಪರೂಪವಂತು ಮೊದಲೇ ಅಲ್ಲ…!

ತೃಪ್ತಿಕೊಡುತ್ತಿರುವ ಕಾರಣಕ್ಕೆ
ಭವಿಷ್ಯದ ಹಾಸಿಗೆ ಆಸೆಗಷ್ಟೆ…
ನಿನ್ನದಲ್ಲದ ಜೀವವಿದು
ನನ್ನದೆ ಬಾಳಿನಲಿ
ನಿನ್ನದೇನೂ ಅಧಿಕಾರವಿಲ್ಲ…!

ತೊರೆದು ಹೋಗುವೆಂಬ ಜಂಭದ ನುಡಿಯೇಕೆ..? ತೊರೆದರು ತೋರಿಸೆನು ನಾನು ನನ್ನ ಅಂತರಾಳಕ್ಕೆ
ನಿನ್ನ ಹೆಜ್ಜೆ ಗುರುತನು..!

ನಿನ್ನ ಸಾವಿನ ಜೊತೆಗಾರ ನಾನಲ್ಲ
ನಾನು ನನ್ನ ದೇಹದ ಒಡೆಯ
ನಾನೇ ನನ್ನ ಕನಸಿನ‌ ರೂಪಕ
ನಿನೇನಿದ್ದರೂ ಜೊತೆಗಾರಳು ಇದ್ದಷ್ಟು ದಿನ…!


ರಂಗಸ್ವಾಮಿ ಮಾರ್ಲಬಂಡಿ

One thought on “ರಂಗಸ್ವಾಮಿ ಮಾರ್ಲಬಂಡಿ ಕವಿತೆ-ನೀನೇನಿದ್ದರೂ ಜೊತೆಗಾರಳು

Leave a Reply

Back To Top