ಡಾ.ಜಿ.ಪಿ.ಕುಸುಮಾ ಮುಂಬಯಿ-ಭಾಗ್ಯಗಳ ಹಿಲಾಲು

kusumamumbai

ಕಾವ್ಯ ಸಂಗಾತಿ

ಭಾಗ್ಯಗಳ ಹಿಲಾಲು

ಡಾ.ಜಿ.ಪಿ.ಕುಸುಮಾ ಮುಂಬಯಿ

ಭಾಗ್ಯಗಳ ಹಿಲಾಲು ಹಿಡಿದು
ಬಂದರವರು
ಎಲ್ಲಿಂದ ನಡೆದು
ಹೋದರೆಲ್ಲಿಗೆ ಕೈಮಾಟ ಮಾಡುತ…

ಉಚಿತಗಳ ತಣ್ಣೀರೆರಚುತ
ಕೈಯ ಕುಲುಕಿ ಲಕ್ಷ್ಮೀಯ ಕೂರಿಸಿ
ಉದರದತ್ತ ಸರಿಸಿದರಕ್ಕಿಯ
ಉಚಿತವೆಂದುಸುರುತ ಜನರನು
ವಸತಿಯ ತೊರೆವಂದಕೆ ತಂದರೆ
ತೋಡಿದ ಗುಂಡಿಯ ಅಳತೆಯ ಕಂಡರೆ

ಭಾಗ್ಯಗಳ ಹಿಲಾಲು ಹಿಡಿದು
ಬಂದರವರು
ಎಲ್ಲಿಂದ ನಡೆದು

ಬೆಳಕನು ನೀಡುವ ಆಸೆಯ ತೂರಿ
ಅಂಧಕಾರವನು ಬೆನ್ನಲಿ ಬಿಟ್ಟರು
ರೋಸಿಹೋಗಿವೆ ಓಣಿಗಳಿಲ್ಲಿ
ಬಾಡಿಹೋಗಿವೆ ಬಸ್ಸುಗಳಿಲ್ಲಿ
ಜೇಬಿಗೆ ಕತ್ತರಿ ಬಾಯಿಗೆ ಹೊಲಿಗೆ
ಬದುಕನು ಸುಲಿಯುತ ಸಾಗುವರು

ಭಾಗ್ಯಗಳ ಹಿಲಾಲು ಹಿಡಿದು
ಬಂದರವರು
ಎಲ್ಲಿಂದ ನಡೆದು

ಯಾರು ಹೆಣೆದ ಈ ಭಾಗ್ಯ ಜಾಲವು
ಮೆಚ್ಚಿ ಹುಚ್ಚರಾದರೆಲ್ಲ…….


ಡಾ.ಜಿ.ಪಿ.ಕುಸುಮಾ ಮುಂಬಯಿ

One thought on “ಡಾ.ಜಿ.ಪಿ.ಕುಸುಮಾ ಮುಂಬಯಿ-ಭಾಗ್ಯಗಳ ಹಿಲಾಲು

Leave a Reply

Back To Top