ಸುಧಾ ಪಾಟೀಲ ಕವಿತೆ-ಅರಿವಾಗಲಿಲ್ಲ

ಕಾವ್ಯ ಸಂಗಾತಿ

ಅರಿವಾಗಲಿಲ್ಲ

ಸುಧಾ ಪಾಟೀಲ

ಪ್ರೀತಿ ಅನುರಾಗವಾಗಿ
ಭಾವ ಬಂಧನದಲಿ
ಬೆಸೆದು ಮೊಳಕೆಯೊಡೆದು ಚಿಗುರುಬಿಟ್ಟು ಚೆಲ್ವರಿದು
ಹೂವಾಗಿದ್ದು ಅರಿವಾಗಲಿಲ್ಲ

ಸಂತೃಪ್ತಿಯಲಿ ಬೆಸಗೊಂಡು
ಆನಂದದ ಮಿಲನದಿ ಕೂಡಿ
ಕಳೆಯುವ ಈ ಲೆಕ್ಕದಿ
ಪ್ರೇಮವು ಅರಳಿ ನಿಂತದ್ದು
ಅರಿವಾಗಲಿಲ್ಲ

ಈ ಜೀವನ ಘಟ್ಟದಿ
ಸಿಕ್ಕ ಗೆಳೆತನದ ಹರವು
ಇಷ್ಟು ಅಗಾಧವಾಗಿ
ಹೆಮ್ಮರವಾಗಿ ಬೆಳೆದದ್ದು
ಅರಿವಾಗಲಿಲ್ಲ

ಸಮಾನ ಭಾವನೆಯ
ವೈಚಾರಿಕತೆಯ ನಿಲುವಿನ
ಯಾರ ಊಹೆಗೂ
ನಿಲುಕದ ಪವಿತ್ರ ಸಂಬಂಧ
ಗಾಢವಾಗಿ ಆವರಿಸಿದ್ದು
ಅರಿವಾಗಲಿಲ್ಲ

ಬೇಡವೆಂದರೂ ಬಿಡದ
ಯಾರ ಅಪ್ಪಣೆಗೂ ಕಾಯದ
ಹೊರಳು ದಾರಿಯ ಪಯಣ
ಜೀವನದುಸಿರು ಆಗಿದ್ದು
ಅರಿವಾಗಲಿಲ್ಲ

ಏನೂ ಅಪೇಕ್ಷಿಸದ
ಕೊಡುಕೊಳ್ಳುವಿಕೆಯಿಲ್ಲದ
ಹಸನಾದ ಬೆಚ್ಚನೆಯ
ಈ ಸ್ನೇಹ ಹೃದಯದ
ಬಡಿತವೇ ಆಗಿದ್ದುಅರಿವಾಗಲಿಲ್ಲ


ಸುಧಾ ಪಾಟೀಲ

12 thoughts on “ಸುಧಾ ಪಾಟೀಲ ಕವಿತೆ-ಅರಿವಾಗಲಿಲ್ಲ

  1. ನಿಮ್ಮ ಸುಂದರ ಕವನ ಕಾವ್ಯ ನಿತ್ಯ ನೂತನ ಸ್ಫೂರ್ತಿ

    1. ಭಾವ ಸ್ಪುರಣೆಯ ಕವಿತೆ ಸುಧಾ ಅವರೇ ಚೆನ್ನಾಗಿ ಬರೆಯುತ್ತಿರಿ

  2. ಇನ್ನೂ ಎತ್ತರಕ್ಕೆ ಬೆಳೆಯುವ ಲಕ್ಷಣಗಳು ಕಾಣುತ್ತಿವೆ ನಿಮ್ಮಲ್ಲಿ ನಿಮ್ಮ ಕವನದಲ್ಲಿ

  3. ಅತ್ಯಂತ ರೊಮ್ಯಾಂಟಿಕ್ ಕಾವ್ಯ ಕುಸುಮ ನಿಮ್ಮ ಪ್ರತಿಭೆಗೆ ಒಂದು ಸಲಾಂ

  4. ನನ್ನ ಕವನವನ್ನು ಮೆಚ್ಚಿದ ಎಲ್ಲ ಕವಿಮನಸುಗಳಿಗೆ ಹೃದಯದಾಳದ ಧನ್ಯವಾದಗಳು

Leave a Reply

Back To Top