ಮಂಜುಳಾ ಪ್ರಸಾದ್ ಕವಿತೆ-ಭರವಸೆ

ಕಾವ್ಯ ಸಂಗಾತಿ

ಮಂಜುಳಾ ಪ್ರಸಾದ್

ಭರವಸೆ

ಪ್ರೀತಿ ಪ್ರೇಮದಿ ಬೆಳೆದ ಹೃದಯದಿ
ತಣ್ಣೆಳಲು ಸಿಗದಿರಲು ಸಾಧ್ಯವೇ?
ರಾಶಿ ಪ್ರೀತಿ ಮನಸಲಿದ್ದರೂ
ಮುಷ್ಠಿ ಪ್ರೀತಿಯ ಅದು ನೀಡದೇ?

ಬಿತ್ತಿ ಬೀಜವ ಬೆಳೆದ ಪರಿಯೊಳು,
ಎತ್ತಿ ಸುರಿದ ಭಾವ ರಾಗದೊಳು
ಹೃದಯ ತೋಟದಿ ಅರಳಿ ನಿಂತಿವೆ ಪ್ರೀತಿಯೊಲವಿನ ಹೂಗಳು..

ಮರವು ತಾ ಒಣಗಿ ಹೋಗಲು
ನೆರಳು ನೀಡಲು ಸಾಧ್ಯವೇ?
ಚಿಗುರು ಮೂಡಲು ರಾಗ ಹಾಡಲು
ಭಾವದೊರತೆಯ ಕೊರತೆಯೇ?

ಮನದ ಪರಿಧಿಗೆ ಬೇಲಿ ಮೂಡುವ
ಮುನ್ನ ಚಿಗುರಲು ಸಾಧ್ಯವೇ?
ಮೌನದುಸಿರಿಗೆ ರಾಗ ನೀಡಲು
ಪರಾಗವುದಿಸಲು ಸಾಧ್ಯವೇ?

ಕೊರತೆ ತುಂಬಲು ಒರತೆ ಎಲ್ಲಿದೆ
ಮನವು ಭಣ ಭಣ ಸುಡುತಿದೆ.
ನಿಶೆಯು ಕಳೆಯಲು ಉಷೆಯು ಮೂಡುವ
ಭರವಸೆಗೆ ಹಪಹಪಿಸಿದೆ.


 ಮಂಜುಳಾ ಪ್ರಸಾದ್

5 thoughts on “ಮಂಜುಳಾ ಪ್ರಸಾದ್ ಕವಿತೆ-ಭರವಸೆ

Leave a Reply

Back To Top