ಕಾವ್ಯ ಸಂಗಾತಿ
ಸಂಘರ್ಷ ಏಕೆ” !!!
ಕಾಡಜ್ಜಿ ಮಂಜುನಾಥ
ಭತ್ತ ಬೆಳೆಯುವ
ಭೂಮಿ , ನೀರಿಗೂ ಇರದ
ಸಂಘರ್ಷ,
ನಾಡಿನ
ದೊರೆಗಳಿಗೇಕೆ;
ಬೀಜ ಹಾಕಿ,ನೀರು ಹರಿಸಿ
ಕೆಲಸ ಮಾಡಿದ
ರೈತನಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;
ಮಳೆ ಸುರಿಸಿದ ಮೋಡ
ಬಿಸಿಲು ನೀಡಿದ
ಸೂರ್ಯನಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;
ಮೊಳೆತ ಬೀಜಕೂ
ಬಲಿತ ಭತ್ತಕೂ
ಉಸಿರು ನೀಡಿದ ಗಾಳಿಗೂ
ಇರದ ಸಂಘರ್ಷ
ದೊರೆಗಳಿಗೇಕೆ!
ಉರಿದ ಬೆಂಕಿಗೂ
ಬೆಂದ ಅಗುಳಿಗೂ
ರುಚಿ ನೀಡಿದ
ಉಪ್ಪಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;
ಹಸಿದ ಹೊಟ್ಟೆಗೂ
ಅನ್ನವಿಟ್ಟ ಕೈಯಿಗೂ
ಕವಳ ಸವಿದ ನಾಲಿಗೆಗೂ
ಇರದ ಸಂಘರ್ಷ
ದೊರೆಗಳಿಗೇಕೆ;
ಬೆಳೆಸಿದ ನಿರ್ಸಗಕೂ
ನೆರಳು ನೀಡಿದ ಮೇಘಕೂ
ಕಾಯುವ ದೇವರಿಗೂ
ಇರದ ಹೆಸರಿನ
ಸಂಘರ್ಷ
ದೊರೆಗಳಿಗೇಕೆ !!
ಕಾಡಜ್ಜಿ ಮಂಜುನಾಥ
ತುಂಬಾ ಚೆನ್ನಾಗಿದೆ ಸಾರ್ ಸೂಪರ್