ಕಾವ್ಯ ಸಂಗಾತಿ
ನಾನು ಹೇಗೆ ಕವಿಯಾದೆ
ಕಂಚುಗಾರನಹಳ್ಳಿ ಸತೀಶ್
ನಾನು ಹೇಗೆ ಕವಿಯಾದೆ
ಇನ್ನೊಬ್ಬರ ಕವಿತೆಗಳಿಗೆ ಕಿವಿಯಾದೆ
ಇರುವೆಗಳ ಕಾಲಿನ ಸಪ್ಪಳ
ಆಲಿಸುವಷ್ಟು ಸೂಕ್ಷ್ಮವಾದೆ
ಹೆಣಭಾರವಾದ ಹೊತ್ತಿಗೆ
ಹೊರಲು ಸಿದ್ಧನಾದೆ
ನೀವು ಕವಿಯಾಗಬೇಕೆ
ಕಲಿಯುತ್ತಿರಿ ಕಾಲವಾಗುವ ತನಕ
ಅಭ್ಯಸಿಸಿ ಅಧ್ಯಯನಶೀಲರಾಗಿ
ತಾಳ್ಮೆಯಿಂದ ತಾಳುತ್ತಿರುವ
ತರಲೆ ತಿಮ್ಮರ
ನಾನು ಹೇಗೆ ಕವಿಯಾದೆ ಗೊತ್ತೆ ನಿಮಗೆ
ತಲೆಯಲಿರುವ ತರಹೇವಾರಿ
ಶಬ್ದಗಳ ಎಡೆಬಿಡದೆ ಹುಡುಕಿದೆ
ಕಲಿಯಲು ಕವಿಗೋಷ್ಠಿಯಲ್ಲೇ
ಕಳೆದು ಹೋದೆ
ನೀವು ಕವಿಯಾಗಬೇಕೆ
ಪದಪುಂಜ ಸೇರಿಸಿ ತಿದ್ದಿ ತೀಡಿ
ಕವನವಾಗಿಸಿ
ಅನ್ಯರಿಗೆ ಹೋಲಿಸದೆ
ಆತ್ಮ ಬಲವ ತಂದುಕೊಳ್ಳಿ
ನೀವು ಕವಿಯಾಗಲು