ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೊಸ ಕಿರಣ

ಸುಧಾ ಪಾಟೀಲ

ಪ್ರೀತಿಯ ಓಲೈಕೆಯಲಿ
ಪ್ರೇಮದ ಗುಂಗಿನಲಿ
ಆಸೆಗಳ ಹೊಂಗನಸಿನಲಿ
ಮನಸಿನ ಹೊಯ್ದಾಟದಲಿ
ಹೊಸ ಕಿರಣ ಕಂಡಿತು

ಅನುಭಂದದ .ಮಂಟಪದಲಿ
ಹಾರೈಕೆಗಳ ಸಂಭ್ರಮದಲಿ
ಏಳು ಬೀಳುಗಳ ಜಗದಲಿ
ನಿರೀಕ್ಷೆಗಳ ಗೊಂದಲದಲಿ
ಹೊಸ ಕಿರಣ ಬೆಳಗಿತು

ಲೆಕ್ಕವಿಲ್ಲದ ಭರವಸೆಯಲಿ
ಆಶ್ವಾಸನೆಗಳ ಸುರಿಮಳೆಯಲಿ
ಗಟ್ಟಿಯಾಗಿ ನಿನ್ನ ಆವರಿಸಿದಾಗ
ಹತ್ತಿರವಾಗಿ ಮುದಗೊಂಡಾಗ
ಹೊಸ ಕಿರಣ ಉಜ್ವಲಿಸಿತು

ಪ್ರೇಮದ ಪರಿಭಾಷೆಯ ತಿಳಿದು
ಭಾಂದವ್ಯದ ಅನುಭೂತಿಯ
ಮೆರೆದು ನೀ ಹತ್ತಿರ ಸೆಳೆದಾಗ
ಬಿಗುಮಾನ ಬಿಟ್ಟು ನಾ ಬಂದು
ಹೊಸ ಕಿರಣ ಪ್ರಜ್ವಲಿಸಿತು

ಹೃದಯದ ಬಡಿತದಲಿ
ಪ್ರತಿಯೊಂದು ಉಸಿರಲಿ
ಪ್ರೇಮದ ಅರಮನೆಯಲಿ
ಹಾಡು ಹಕ್ಕಿಗಳಾದಾಗ
ಹೊಸ ಕಿರಣ ಮಿಂಚಿತು
!


ಸುಧಾ ಪಾಟೀಲ

About The Author

4 thoughts on “ಸುಧಾ ಪಾಟೀಲ-ಹೊಸ ಕಿರಣ”

Leave a Reply

You cannot copy content of this page

Scroll to Top