ಯೋಗೇಂದ್ರಾಚಾರ್ ಎ. ಎನ್.ಕವಿತೆ-ಗೋರಿಯೊಳಗಿಂದ ಗುಡಿಗೆ

ಕಾವ್ಯ ಸಂಗಾತಿ

ಗೋರಿಯೊಳಗಿಂದ ಗುಡಿಗೆ

ಯೋಗೇಂದ್ರಾಚಾರ್ ಎ. ಎನ್.

ಮುಗಿಲಗಳ್ಳರೆಂದು ಕರೆದು ಬಾನಿಗೆ ಬಲೆ ಬೀಸಿದ್ದಾರೆ ಗೆಳೆಯ
ಕಡಲ್ಗಳ್ಳರೆಂದು ಕಟ್ಟಿ ಹಾಕಿ ಭೂಮಿಗೆ ಬೇಲಿ ಹಾಕಿದ್ದಾರೆ ಗೆಳೆಯ

ಗುಡ್ಡದ ತುದಿಗೆ ಹೋಗೋಣವೆಂದು ಗುಡ್ಡವನ್ನೇ ಕಡಿದರೆ ಹೇಗೆ
ಲೂಟಿಕೋರರೆಂದು ಕೂಗಿ ಹಣೆಗೆ ಬಂದೂಕು ಹಿಡಿದಿದ್ದಾರೆ ಗೆಳೆಯ

ಹೆಕ್ಕಿ ತಂದವನಿಗಿಂತ ಇಲ್ಲಿ ಖಾರ ಅರೆದವನಿಗೇ ಬೆಲೆ ಹೆಚ್ಚಾಗಿದೆ
ನಿರ್ದಯಿಗಳೆಂದು ನುಡಿದು ಬದುಕಿಗೆ ಬೆಂಕಿ ಇಟ್ಟಿದ್ದಾರೆ ಗೆಳೆಯ

ಚುಕ್ಕಿ ಚಂದ್ರ ಸೂರ್ಯಾದಿ ದೇವತೆಗಳಿಗೂ ಕಾಯಕದ ಗುಣವುಂಟು
ಪುಂಗಿ ದಾಸನೆಂದು ಹಾಡಿ ಕೈಗೆ ಬಿಟ್ಟಿಭಾಗ್ಯದ ಹಗ್ಗ ಬಿಗಿದಿದ್ದಾರೆ ಗೆಳೆಯ

ಮೌನಯೋಗಿಯು ನಿಮ್ಮ ಒಂದೊಂದು ನಡೆಗೂ ಅಂಕುಶವಾಗಿದ್ದಾನೆ
ಅವಿದ್ಯಾವಂತನೆಂದು ಒದರಿ ಬುರುಡೆಗೆ ಬತ್ತಾಸು ತಿನಿಸುತ್ತಿದ್ದಾರೆ ಗೆಳೆಯ


ಯೋಗೇಂದ್ರಾಚಾರ್ ಎ ಎನ್

One thought on “ಯೋಗೇಂದ್ರಾಚಾರ್ ಎ. ಎನ್.ಕವಿತೆ-ಗೋರಿಯೊಳಗಿಂದ ಗುಡಿಗೆ

  1. ಶೀರ್ಷಿಕೆಯನ್ನು ಹಾಕದೆ ಗಝಲ್ ವಿಭಾಗದಲ್ಲಿ ಪ್ರಕಟಿಸಬಹುದಾಗಿತ್ತು.

Leave a Reply

Back To Top