ಕಾವ್ಯ ಸಂಗಾತಿ
ಚಂದ್ರ ಚಕೋರಿ
ಡಾ. ಮೀನಾಕ್ಷಿ ಪಾಟೀಲ್
ನಿನ್ನ ಚೆಲುವೆಂಬೋ ಚೆಲುವು
ಚಂದಿರನಿಗೂ ತಿಳಿದಿಲ್ಲ
ಬೆಳದಿಂಗಳನ್ನು ಚೆಲ್ಲುವುದೇ
ಅವನಿಗೆ ಕೆಲಸ
ನೀ ನಕ್ಕರೆ ನಕ್ಷತ್ರಗಳಿಗೆ
ಹೊಟ್ಟೆಕಿಚ್ಚು
ಹೊಳೆಯುವ ನಿನ್ನ ಕಣ್ಣ ಬೆಳಕನ್ನ
ಇಣುಕಿ ನೋಡುವವು
ಬಾನ ಮರೆಯಲ್ಲಿ
ಉಷೆ ಮೂಡಿ ಮರೆಯಾಗುವಳು
ಬಿಳಿದಾದ ಮೋಡ ಬಂಗಾರದಂತೆ
ಅರಿಶಿಣ ಲೇಪ ಉಷೆ ವದನಕೆ
ಕೆಂಪಾದ ಬಾನ ಬಣ್ಣ ಅಧರಕೆ
ಮೂಡಣದ ಮೊಗದಲ್ಲಿ
ಹೊನ್ನಿನಾ ಹುಡಿ
ನೇಸರ ಹರಡುವನು
ಕೆಂಬಣ್ಣದ ಓಕುಳಿ
ಅರುಣ ರಾಗವ ಮೀಟಿದೆ
ಹೃದಯದ ವೀಣೆ
ನೂರು ಬಣ್ಣಗಳ ನೂರು ಭಾವ
ಮನ ಬಿಚ್ಚಿ ಹಾಡಿದೆ ನಿನ್ನ ಹಾಡು
ಡಾ. ಮೀನಾಕ್ಷಿ ಪಾಟೀಲ್
ಸುಂದರವಾದ ಕವಿತೆ ಮೇಡಂ ರಿ
ಬೆಳದಿಂಗಳನ್ನು ಚೆಲ್ಲುವುದೇ ಅವನಿಗೆ ಕೆಲಸ….
ಸುಂದರ ಭಾವ ತುಂಬಿದ ಕವನ ಹೊನಲಾಗಿ
ಹರಿದಿದೆ… ಮೇಡಂ