ಕಾವ್ಯ ಸಂಗಾತಿ
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ
ಗಜಲ್
ನಿನ್ನ ಕಣ್ಣ ಕುಡಿನೋಟದ ಸೆಳೆತ ಕಾಡುತ್ತಿದೆ ಪ್ರಿಯ ಸಖಿ
ನಿನ್ನ ತುಟಿ ಅಂಚಿನ ತುಂಟಾಟ ಸೆಳೆಯುತ್ತಿದೆ ಪ್ರಿಯ ಸಖಿ
ನಿನ್ನ ಕೈಯಿಡಿದು ಸಾಗಿದ ಹೆಜ್ಜೆಗಳ ಪಯಣ ಮಾಸದಿರಲಿ ಎದೆಯೊಳಗೆ
ನಿನ್ನ ಮೋಹದ ಕಾಂತಿಯ ಕಿಡಿ ಕಿಡಿಯಾಗಿ ಉರಿಯುತ್ತಿದೆ ಪ್ರಿಯ ಸಖಿ
ನಿನ್ನ ತೋಳ್ಬಂದಿಯಲಿ ನಾನು ಗಟ್ಟಿಯ ನಿಟ್ಟುಸಿರ ಬಿಟ್ಟಿದ ಸವಿಯೇ ಚಂದ
ನಿನ್ನ ಆಲಂಗಿಸಿದ ಆ ಆನಂದದ ಕ್ಷಣವು ನೆನಪಾಗುತ್ತಿದೆ ಪ್ರಿಯ ಸಖಿ
ನಿನ್ನ ಚುಂಬನದ ಸಿಹಿ ಮಳೆಯಲಿ ಜೇನ ಸವಿ ಸವಿದು ಮಿಂದಿಹಿನೆ ಮತ್ತೆ ಮತ್ತೆ
ನಿನ್ನ ಬಿಸಿ ಉಸಿರು ಸೆಳೆ ಸೆಳೆಯುತ್ತಾ ನನ್ನ ಆವರಿಸಿ ಆಕ್ರಮಿಸುತ್ತಿದೆ ಪ್ರಿಯ ಸಖಿ
ನಿನ್ನ ತಬ್ಬಿದ ಬಳ್ಳಿಯಂತಾಗಿಹೆ ನಾನು, ಆಸರೆ ಇನ್ಯಾರು ಎನಗೆ ?
ನಿನ್ನ ಒಲವಿನಾ ಆ ನಗುವ ನಂಬಿಕೆಯಲಿ ಈ ಜೀವ ಉಸಿರಾಡುತ್ತಿದೆ ಪ್ರಿಯ ಸಖಿ
ಲಕ್ಷ್ಮೀನಾರಾಯಣ ಕೆೆ ವಾಣಿಗರಹಳ್ಳಿ
Awesome