ರೇಖಾ ಸುದೇಶ್ ರಾವ್ ಕವಿತೆ-ಕಾವ್ಯ ಕನ್ನಿಕೆ

ಕಾವ್ಯ ಸಂಗಾತಿ

ಕಾವ್ಯ ಕನ್ನಿಕೆ

ರೇಖಾ ಸುದೇಶ್ ರಾವ್

ಸುಂದರ ಲೇಖನಿ ಹಾಳೆಗಳ ಮೇಲೆ ನರ್ತಿಸಿ
ದಿಟ್ಟ ಮನದಿ ಪದಪುಂಜಗಳ ಪೋಣಿಸಿ
ನವ ಚೇತನವು ಪುಟಗಳಲ್ಲಿ ಉದಿಸಿ
ಭವ ಸಾಗರದಿ ಮೈಮನತಣಿಸಿ

ತಪ್ಪುಗಳ ಬರಹದಲಿ ಮೆತ್ತಗೆ ಸರಿಸಿ
ಒಪ್ಪುಗಳ ಪ್ರಭುದ್ಧ ನುಡಿಗಳಲ್ಲಿ ಸುರಿಸಿ
ಕಪ್ಪು ಚುಕ್ಕೆಗಳ ಬಿಳಿ ಕಾಗದಿದಿಂದ ಅಳಿಸಿ
ಕಟು ಮಾತ ಲೆಕ್ಕಿಸದೆ ಕವನಗಳು ಮನವಿರಿಸಿ

ನಲಿದಾಡಿತ್ತು ಚಿತ್ತ ದೊರೆಯಲು ಸುಜ್ಞಾನ
ಕಲಿಯಲು ತವಕ ತೊರೆದ ಅಜ್ಞಾನ
ಸಲಿಗೆಯು ತಳೆಯಿತು ಪದಗಳಲ್ಲಿ ಮೌನ
ಬಲಿಯಾದ ಹೃದಯದ ಗುರಿಯತ್ತ ಗಮನ

ಅಂದದ ಚಿತ್ತಾರ ಸೌಂದರ್ಯ ಕನ್ನಿಕೆ ಹೆಜ್ಜೆಯಿಕ್ಕಿ
ಚಂದದ ಬರವಣಿಗೆ ಸಂಶಯದತ್ತ ನೂಕಿ
ಬಂಧಿಸಿಡಲು ಬಿಗಿಯಾಗಿ ಹಗ್ಗದಲ್ಲಿ ಕಟ್ಟಿ
ಬಿಡಿಬಿಡಿಯಾಗಿ ಬರಹ ಮೂಡಲಿ ಶತ್ರುಗಳ ಮೆಟ್ಟಿ


ರೇಖಾ ಸುದೇಶ್ ರಾವ್

Leave a Reply

Back To Top