ಕಾವ್ಯ ಸಂಗಾತಿ
L.Board ಡಾಯಿತು L Bird
ರೇಖಾ ಸುದೇಶ್ ರಾವ್
ಚಿತ್ತ ಹವಣಿಸಿತು ಗೀಚಲೊಂದು ಕವಿತೆ
ಮನಮಿಡಿಯಿತು ಬರೆಯಲು ಕುಳಿತೆ
ಮೋಹದ ನಗುವಿಗೆ ನನ್ನ ನಾ ಮರೆತೆ
ಕ್ಷಣಮಾತ್ರದಲ್ಲಿ ಮನೆಯಳಂತೆ ಬೆರೆತೆ
ಬಿದು ಮಾನವಿಲ್ಲದ ಪ್ರೀತಿಯ ಮಾತಿಗೆ ಹೃದಯ ಕರಗಿದೆ
ಹಾಸ್ಯಮಯನೂಡಿಗೆ ಮನ ಸೋತೆ
ಹೊಗಳಿಕೆಯ ಮಾತುಗಳು ಕಿವಿಗೆ ಇಂಪಾಯಿತೇ
ಆಲಿಸಿದ ಹಾಡಿಗೆ ಮನಮಿಡಿದಿದೆ
ಮಂಜಿನ ಹನಿಗೆ ಕಾಯವೆಲ್ಲ ತಂಪಾಯಿತೆ
ಎಲ್ ಬೋರ್ಡ್ ಎಂದಾಗಲೊಂದು ಬಾರಿ ಕೈ ಕಾಲು ನಡುಗಿತೆ
ಲತೆಯ ಆವರಿಸಿದಂತೆ ಕರಗಳು ಸ್ಪರ್ಶಿಸಿತೆ
ಹೃದಯ ವೀಣೆಯ ನುಡಿಸುವ ತಂತಿಯಾಯಿತೆ
ಮಾತಿನ ದಾಟಿ ನೋಟಕ್ಕೆ ಮನಕುಗ್ಗಿತೆ
ಸರಳತೆ ನಯ ವಿನಯ ಮೋಡಿ ಮಾಡಿತೆ
ಒಲವಿಂದ ಬೀಸಿದ ಬಲೆಗೆ ಸಿಕ್ಕ ಮೀನಾಯಿತೆ
ಪ್ರಣಯದ ಮನದೊಳು ಹೊಕ್ಕು ಬಂಧಿಯಾಯಿತೆ
ರೇಖಾ ಸುದೇಶ್ ರಾವ್
Super song❤️❤️