ವಿಮಾಲಾರುಣ ಪಡ್ಡoಬೈಲು ಕವಿತೆ-ಬಯಸಿದರು

ಕಾವ್ಯ ಸಂಗಾತಿ

ಬಯಸಿದರು

ವಿಮಾಲಾರುಣ ಪಡ್ಡoಬೈಲು

.

ಚಿಪ್ಪೊಳಗಿನ ಮುತ್ತಾಗಬೇಕು
ಆದದ್ದು ಖಾಲಿ ಚಿಪ್ಪು
ಮುತ್ತು ಜೋಡಿಸೋ ಪ್ರಯತ್ನ
ಅವಿರತದಿ ಸಾಗಿತ್ತು

ಬಯಸಿದರು
ಕೀರ್ತಿ ಶಿಖರವೇರೆಂದು
ನೂರು ಪಥದೊಳಗಂಧಕಾರ
ಅಳಿದಿತ್ತು ಅರಿವು

ಬಿರುಗಾಳಿಗಳುಕದ
ಎಲ್ಲೆ ಮೀರಿದ ಪ್ರೀತಿ
ಸೆಳೆದೊಯ್ದವು
ಪ್ರತಿ ಪ್ರೀತಿ ಮರಳಿಸದಾದೆ

ತ್ಯಾಗಮಾತೆ ಪ್ರಾಣಪಿತ
ಏಕಾಂಗಿಗೆ ಕನಸ ಬಿತ್ತಿ
ನಿಟ್ಟುಸಿರ ಬಿಟ್ಟು
ಮಾಯವಾದರು

ತ್ಯಾಗದ ಜ್ಯೋತಿ ನಂದಬಾರದಿತ್ತು
ಸುಸೂತ್ರ ಬದುಕಿನ ಸೂತ್ರ
ನನ್ನನಗಲಿ
ಶೂನ್ಯತೆ ಕವಿದಿತ್ತು

ಸುತ್ತಲೂ ಧನಕನಕ
ಅದೀಗ ಅಳಿಸಿದ್ದನ್ನ
ತಳಮಳದ ತಾಂಡವ ನೃತ್ಯ
ಮನದಾಳದಿ

ಬದುಕ ಅಣಕಿಸಿದರು
ಧೃತಿಗೆಡದೆ ನೋವುಂಡ ಜೀವದ
ಕನಸ ಜೋಳಿಗೆಗೆ ಪ್ರೀತಿಯನೆರೆದು
ಬಯಸಿದ ಬದುಕ ಕಟ್ಟುತಿಹೆ….


         

One thought on “ವಿಮಾಲಾರುಣ ಪಡ್ಡoಬೈಲು ಕವಿತೆ-ಬಯಸಿದರು

  1. ಮುತ್ತಾಗೋದಕ್ಕೆ
    ಇನ್ನೂ ಹೊತ್ತುಂಟು
    ಮತ್ಯಾಕೆ ಬೆಸರ ವ್ಯಸನವಂಬಿಟ್ಟು
    ಹಸನಾಗಿ ಬಾಳ್ವೊಡೆ ಅದೇ ಮುತ್ತಲ್ಲವೆ? ಮತ್ತಿನ್ನೇನು?

Leave a Reply

Back To Top