ಮನ್ಸೂರ್ ಮುಲ್ಕಿ ಕವಿತೆ- ಸಿಹಿ

ಕಾವ್ಯ ಸಂಗಾತಿ

ಸಿಹಿ

ಮನ್ಸೂರ್ ಮುಲ್ಕಿ


ನೆರಳನು ನೀಡುವ ಮಾವಿನ ಮರವೇ
ನಿನ್ನ ಸಿಹಿಯೊಳು ಏನಿಹುದು.
ಭೂಮಿಯ ಬೆಳಗುವ ಕಾಂತಿಯ ಸೂರ್ಯನೆ
ನಿನ್ನ ಕಿರಣದೊಳೇನಿಹುದು.

ಅಕ್ಷಿ ಪಟಲದಲಿ ಮೂಡುವ ಛಾಯೆಯೇ
ನಿನ್ನ ಕಣ್ಣೋಳು ಏನಿಹುದು.
ಹೃದಯ ಚಿತ್ರವ ಮೂಡಿಸೊ ಕವಿಯೇ
ನಿನ್ನ ಮನಸ್ಸಿನೊಳೇನಿಹುದು.

ದೂರ ತೀರಕೆ ಸಾಗುವ ಪಕ್ಷಿಯೇ
ನಿನ್ನ ಶಕ್ತಿಯೊಳೇನಿಹುದು.
ಮನಸನು ಸೆಳೆಯುವ ಸುಂದರ ಹೂವೆ
ನಿನ್ನ ಬಣ್ಣದೊಳೇನಿಹುದು.

ಕಡಲಿನ ಅಂದವು ನೋಡಲು ಚಂದವು
ಸಂಜೆಯ ಬಾನಲಿ ಏನಿಹುದು
ಜಗದೊಳಗೆಲ್ಲರು ಒಂದೇ ಸಮಾನರು
ಎನ್ನುವ ಭಾವನೆ ಮೂಡಿಹುದು.


Leave a Reply

Back To Top