ಕಾವ್ಯ ಸಂಗಾತಿ
ಕಾರಣ
ಪ್ರೊ ರಾಜನಂದಾ ಘಾರ್ಗಿ
ಪ್ರೀತಿಸಲಿಲ್ಲ ನಿನ್ನ ನಾನು
ನಿನ್ನ ಕಣ್ಣಂಚಿನ ಮಿಂಚಿಗೆ
ತುಟಿಯಂಚಿನ ನಗೆಗೆ
ಪ್ರೀತಿಸಲಿಲ್ಲ ನಿನ್ನ ನಾನು
ನಿನ್ನ ಧ್ವನಿಯ ಏರಿಳಿತಕ್ಕೆ
ಅದು ಎಬ್ಬಿಸುವ ತರಂಗಗಳಿಗೆ
ಪ್ರೀತಿಸಲಿಲ್ಲ ನಿನ್ನ ನಾನು
ನಿನ್ನೆದೆಯ ಗಡಸುತನಕ್ಕೆ
ಸ್ನಾಯುಗಳ ಮೋಹಕತೆಗೆ
ಪ್ರೀತಿಸಲಿಲ್ಲ ನಿನ್ನ ನಾನು
ಮಾತುಗಳಲ್ಲಿಯ ಮೂಡಿಗೆ
ಶಬ್ದಗಳು ಹೊಸದ ಜಾಲಕ್ಕೆ
ಮುಳುಗಿದೆ ಭಾವನೆಗಳ ಆಳಕ್ಕೆ
ಕರಗಿದೆ ಸಂವೇದನೆಗಳ ಕಾವಿಗೆ
ಸೋತೆ ನಿನ್ನ ಹುಚ್ಚು ಪ್ರೀತಿಗೆ
ಪ್ರೀತಿಸಿದೆ ನಿನ್ನ ನಾನು
ನಿನ್ನ ಬೆಚ್ಚನೆಯ ಎದೆಯಲ್ಲಿ
ಮುಖ ಹುದುಗಿಸಿ ಅಳುವುದಕ್ಕೆ
ಸುಂದರ ಪ್ರೀತಿಯ ಅಭಿವ್ಯಕ್ತಿ
ಸುಂದರವಾದ ಕವಿತೆ
ಒಳ್ಳೆ ಕವಿತೆ