ಇಮಾಮ್ ಮದ್ಗಾರ ಕವಿತೆ-ದಿಟ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ದಿಟ

ನೀನು ನನ್ನ
ಬಿಟ್ಟು ಹೋ..ದೆ
ಅಂತ ನಾಚಿಕೆ
ಬಿಟ್ಟು ಹೇಗೆ
ಹೇಳಲಿ ನಾನು ??

ಕಣ್ಣುಗಳೆರಡೂ..
ಒಟ್ಟಾಗಿ ಓದುತ್ತವೆ
ಹೃದಯ ದಲ್ಲಡಗಿದ
ಗುಟ್ಟಿನಾ..
ಪುಟವ

ರಾತ್ರಿ ನಿದ್ದೆ
ಬಾರದಿದ್ದಾಗ
ಕಣ್ಣ ಕನಸುಗಳು
ಆತ್ಮಹತ್ಯೆ
ಮಾಡಿಕೊಳ್ಳುತ್ತವೆ

ಮೋಡದ ಉತ್ಕಟ
ಬಯಕೆ ತೀರಿ..
ಹನಿದಾಗ ಮಾತ್ರ…
ಆ‌.ಹನಿ ಹನಿಯೂ..
ಮಣ್ಣ ಕಣ ಸೇರಿ
ಬಳ್ಳಿಯ ಬಯಕೆಯೂ..
ತೀ…ರಿ ಹೂವು
ಅರಳಲು ಸಾಧ್ಯ

ಗಗನದಾ..
ಸ್ವರ್ಗದಿಂದ
ಸುರಿದ ಪ್ರತಿ..
ಮಳೆ ಹನಿಯೂ….
ಸಮುದ್ರ ಸೇರಿ
ಉಪ್ಪಾಗುವದು
ಎಷ್ಟು ದಿಟವೋ..

ಪ್ರೀತಿ ತುಂಬಿದ
ಹನಿ ಮಾತ್ರ
ಚಿಪ್ಪ ಸೇ..ರಿ
ಮುತ್ತಾಗುವದೂ..
ಅಷ್ಟೇ.. ದಿಟ


ಇಮಾಮ್ ಮದ್ಗಾರ

Leave a Reply

Back To Top