ಜಯಂತಿ ಸುನಿಲ್-ಗಜಲ್

ಕಾವ್ಯ ಸಂಗಾತಿ

ಜಯಂತ ಸುನಿಲ್

ಗಜಲ್

ಹೋದರೆ ಹೋಗಲಿ ಬಿಡು ಎದೆಯಲಿ ಒಂದಾದರೂ ಹಾಡಾಗಿ ನುಲಿಯಲಿ..
ಹೋದರೆ ಹೋಗಲಿ ಬಿಡು ಕವಿತೆಯಲಿ ಒಂದಾದರೂ ಸಾಲಾಗಿ ಉಳಿಯಲಿ…!!

ಹೃದಯದ ಮಾತನ್ನು ಜೋಡಿಸುವಲ್ಲಿ ಜೊತೆಗಾರನಾಗಿದ್ದ..
ಹೋದರೆ ಹೋಗಲಿ ಬಿಡು
ಕಾಲುದಾರಿಯಲಿ ಒಂದಾದರೂ ನೆಪವಾಗಿ ನೆನಪಾಗಲಿ..!!

ಕೆಂಡ ಮೆತ್ತಿದ ಕೈಗೆ ಗೋರಂಟಿ ಹಚ್ಚುತ್ತಿದ್ದ,ಬಗಲಿಗೆ ಕಿಡಿಕಾರಿದ
ಹೋಗಲಿಬಿಡು ಹೃದಯದಲಿ ಒಂದಾದರೂ ಇರಿತವಾಗಿ ಗುರುತುಳಿಯಲಿ..!!

ನನ್ನೊಳಗೆ ನಾನು ಕಳೆದಂತೆಲ್ಲ ಹುಡುಕುತ್ತಿದ್ದ,ಇಂದೇಕೋ ಕಾಣದಾದ
ಹೋದರೆ ಹೋಗಲಿ ಬಿಡು
ತನುವಲಿ ಒಂದಾದರೂ ಗಾಯವಾಗಿ ಉಸಿರಾಡಲಿ..!!

ನನ್ನೆದೆಯಿರಿದ ಕೈಗಳು ಅವನದೆಂದು ಊಹಿಸಿರಲಿಲ್ಲ..
ಹೋದರೆ ಹೋಗಲಿ ಬಿಡು ಪ್ರೇಮದಲಿ ಒಂದಾದರೂ ಪಾಠವಾಗಿ ಪುಟಸೇರಲಿ..!!

ನಗುತಾ ವಿದಾಯ ಹೇಳಲಿಲ್ಲಾ ಕೊನೆಗೆ..ನಂಜುಣಿಸಿ ಹೋದ
ಹೋದರೆ ಹೋಗಲಿ ಬಿಡು ಕುದಿವ ಕಣ್ಣಿನಲಿ ಒಂದಾದರೂ ಕಿಡಿಯಾಗಿ ಜೀವಿಸಲಿ..!!

ಸ್ವರ್ಗದ ಹಾದಿಯೆಂದುಕೊಂಡರೆ ನೋವಿನ ತಾವಿನ ಪರಿಚಯ..
ಹೋದರೆ ಹೋಗಲಿ ಬಿಡು ಜನ್ಮದಲಿ ಒಂದಾದರು ದಿನ ಜಯ ನನ್ನದಾಗಿ ಹರಸಿಬರಲಿ..!


2 thoughts on “ಜಯಂತಿ ಸುನಿಲ್-ಗಜಲ್

  1. ನಂಜುಣಿಸಿ ಹೋದವನನ್ನೂ ಇನ್ನೂ ನೆನಪಿಸಿಕೊಳ್ಳುತ್ತಿದ್ದೀರಿ, ಅಷ್ಟೇ ಅಲ್ಲ ಹೋದರೆ ಹೋಗಲಿ ಎನ್ನುತ್ತಲೇ ಒಂದು ಸಣ್ಣ ಅಂಶವಾಗಿ ನಿಮ್ಮಲ್ಲೇ ಉಳಿಯಲಿ ಎಂದು ಅಪೇಕ್ಷಿಸುತ್ತೀರಿ!!
    ನಿಮ್ಮ ದೊಡ್ಡತನಕ್ಕೆ ಇದೋ ನನ್ನ ನಮನ.
    ಕವನ ಸೂಪರ್.

Leave a Reply

Back To Top