ಗಿಳಿರಾಮ ಮಕ್ಕಳ ಪದ್ಯ- ನಾಗರತ್ನ ಹೆಚ್. ಗಂಗಾವತಿ

ಮಕ್ಕಳ ಪದ್ಯ

ನಾಗರತ್ನ ಹೆಚ್. ಗಂಗಾವತಿ

ಗಿಳಿರಾಮ

ಕೆಂಪು ಕೊಕ್ಕು
ಹಸಿರು ಪುಕ್ಕ.

ಕರೆದರೆ ಬರುವ
ನಮ್ಮ ಗಿಳಿರಾಮ.

ತೋಟದಿ ಬಗೆ ಬಗೆ
 ಹಣ್ಣನ್ನು ನೋಡಲು.

 ಹಾರುತ ಕುಣಿಯುವನು
ಕೊಕ್ಕನು ಚಾಚಿ ಹಣ್ಣನ್ನು ತಿನ್ನಲು.

ಖುಷಿಯಿಂದ ಹೊರಡುವನು
ನನ್ನ ಜೊತೆಗೆ ಸಾಗುತ ಬರಲು.

ಬೆನ್ನ ಹೆಗಲ ಹೇರುವನು
ನಮ್ಮ ನೆಚ್ಚಿನ ಗಿಳಿ ರಾಮ.

ಹೋಗುವ ದಾರಿಯಲ್ಲಿ ಕಣ್ಣನ್ನು

ಪಿಳಿ ಪಿಳಿ ಬಿಡುತ ನೋಡುವನು.

ಎಲ್ಲರ ನೆಚ್ಚಿನ ಗಿಳಿ ರಾಮ
ನಮ್ಮ ಮನೆಯ ಗಿಳಿರಾಮ.


One thought on “ಗಿಳಿರಾಮ ಮಕ್ಕಳ ಪದ್ಯ- ನಾಗರತ್ನ ಹೆಚ್. ಗಂಗಾವತಿ

Leave a Reply

Back To Top