ಕಾವ್ಯ ಸಂಗಾತಿ
ಸುಧಾ ಪಾಟೀಲ
ಮುಂಗಾರು
ನೀನಿಲ್ಲದ ಮುಂಗಾರು
ರಭಸದಿ ಸುರಿದು
ನೆನಪು ಮಾಡುತಿದೆ
ನಿನ್ನ ಕೈ ಕುಲುಕು
ನಗುನಗುತ ಅರಳು
ಹುರಿದಂತೆ ಮಾತಾಡಿ
ನಿಮಿಷದಲ್ಲೇ ನನ್ನತ್ತ
ಸೆಳೆಯುವ ನಿನ್ನ
ಕುಡಿನೋಟ ನೆನಪು
ಸುರಿಯುತ್ತಿದೆ ನಿನ್ನೀ
ಪ್ರೀತಿ ಮಳೆಯು
ಹಸಿ ಮಣ್ಣಿನ ವಾಸನೆ
ಬೀಸುವ ತಂಪು
ಗಾಳಿಯಲಿ ಹರಡಿದೆ
ನಿನ್ನ ಅಂತರಾಳದ
ಸಿಹಿ ಭಾವ ಕಾವ್ಯ
ಮುಸುಲ ಧಾರೆಯಲ್ಲಿ
ನೆನೆಯುತ್ತ ನೆನೆಯುತ್ತ
ಹೊಂಗಿರಣ ಮೂಡಿಸಿ
ಹೊರಟ ನಿಂತ ನಿನ್ನ
ಮರೆಯಲಾರದ ರಸಮಯ
ಸಿಹಿ ಘಳಿಗೆಗಳು
ಬಯಸಿ ಬಂದ
ಸ್ನೇಹವ ಮುಂಗಾರಿನ
ಮಳೆಯಲಿ ತೋಯಲು
ಬಿಟ್ಟು ಬಂಧಿಯಾದೆ
ಬಿಡಿಸಲಾರದ ನಿನ್ನ
ಬಾಹು ಬಂಧನದಲ್ಲಿ
ಜಿಟಿ ಜಿಟಿ ಮಳೆಯ
ಸೊಗಡಿನಲಿ ತಣ್ಣಗೆ
ಸುಳಿದಾಡಿತು ನಿನ್ನ
ಮುದಗೊಳಿಸಿದ ಹಸಿರು
ಹನಿ ಹನಿ ಸಿಂಚನದ ಮಾತು
ಅತ್ಯುತ್ತಮ ಸುಂದರ ಭಾವ ತೋರಣ ನಿಮ್ಮ ಈ ಕವನ ಸುಧಾ ಪಾಟೀಲ ಬೆಳಗಾವಿ
ಸೋದರಿ, ತಮ್ಮ ಸ್ವರಚಿತ ಕವನ “ಮುಂಗಾರು” ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತಮ್ಮ ಕವನ ಓದಿ ವರುಣದೇವ ಜಿಟಿ ಮಳೆಯ ಸೊಗಡಿನಲ್ಲಿ ತಣ್ಣಗೆ ಇಂದು ಸುಳಿದಾಡುತ್ತಿದ್ದಾನೆ. ತಮ್ಮ ಸುಂದರ ಸಾಹಿತ್ಯದ ಚಂದಾದ ಪದಗಳಿಂದ ಹೆಣೆದು ಅಂದದ ಕವನಕ್ಕೆ ನನ್ನ ಪ್ರೀತಿಪೂರ್ವಕ ವಂದನೆಗಳು, ಅಭಿನಂದನೆಗಳು. ಶುಭ ಸಂಜೆ.
ನನ್ನ ಕವನ ಮೆಚ್ಚಿ ಪ್ರತಿಕ್ರಿಯೆ ನೀಡಿದ ಕವಿ ಮನಸುಗಳಿಗೆ ಧನ್ಯವಾದಗಳು