ಬಾಪು ಖಾಡೆ- ಕವಿತೆ /ಅಪ್ಪ

ಬಾಪು ಖಾಡೆ- ಕವಿತೆ /ಅಪ್ಪ

ತಪ್ಪು-ಒಪ್ಪುಗಳನೆಲ್ಲ
ಒಪ್ಪಿಕೊಂಡವನು ಅಪ್ಪ
ಗೆಲುವಿನ ಗಳಿಗೆಯಲ್ಲಿ
ಅಪ್ಪಿಕೊಂಡವನು ಅಪ್ಪ

ಕತ್ತಲೆಯ ದಾರಿಯಲ್ಲಿ
ಹಗಲಾದವನು ಅಪ್ಪ
ಸೋತ ಹೆಜ್ಜೆಗಳಲ್ಲಿ
ಹೆಗಲಾದವನು ಅಪ್ಪ

ಸಾಲ ಮಾಡಿ ಓದು ಕಲಿಸಿದ
ಕನಸುಗಾರ ಅಪ್ಪ
ಕೈ ತುಂಬಾ ಹಣ ತಂದರೂ
ಅಪೇಕ್ಷಿಸದ ಅಪ್ಪ

ಕಣ್ಣ ಸನ್ನೆಯಲಿ ತನ್ನ ಚಿಣ್ಣರಿಗೆ
ಶಿಸ್ತು ಕಲಿಸಿದ ಅಪ್ಪ
ನೂರು ತೊಂದರೆ ಎದುರು ಬಂದರೂ
ಎದೆಗುಂದದಿರುವ ಅಪ್ಪ


Leave a Reply

Back To Top