ಅಪ್ಪನ ದಿನಕ್ಕೊಂದು

ಡಾ.ಡೋ.ನಾ.ವೆಂಕಟೇಶ

ಅಮೃತದ ಅಪ್ಪ

ಅಮೃತ ವರ್ಷಕ್ಕೆ ಅಪ್ಪ ತಟಕ್ಕನೇ
ಮುದುಕನಾಗಿ ಬಿಟ್ಟ!
ಹುಟ್ಟಿದ ಹತ್ತು ವರ್ಷಕ್ಕೇ ಅಪ್ಪ
ಗಲ್ಲಿ ಗಲ್ಲಿ ಸುತ್ತಿದ,
ಬೆವರ ಮಣಿಗಳ ಅಗೆದಗೆದು
ಪೋಣಿಸಿದ
ಅಪ್ಪ ನನ್ನಪ್ಪ,
ನನ್ನ ಚೆಡ್ಡಿಯಿಂದ ಪ್ಯಾಂಟಿಗೆ
ಪರಿಚಯಿಸಿದ ನನ್ನಪ್ಪ,
ತಾ
ಜೀವನದುದ್ದಕ್ಕೂ ಪಂಚೆಯಲ್ಲೇ ಉಳಿದ.
ನಮ್ಮ ಪಯಣದಲ್ಲೇ ತಾ
ಪ್ರಪಂಚ ಕಂಡ
ನನ್ನಪ್ಪ ಅವನ ಅಮೃತಮಹೋತ್ಸವಕ್ಕೆ!

ಯಾವ ಶುಕ್ರನ ಶಾಪಕ್ಕೋ
ಯಯಾತಿಯಾಗೇ ಉಳಿದು ಬಿಟ್ಟ.
ನಾವು ಅವನ ಸಂತಾನ ಯಾರೂ
ಪುರು ಗಳಾಗಲೇ ಇಲ್ಲ
ಅವನ ಪಯಣದಲ್ಲೆಲ್ಲೂ
ಅವನಿಗೆ ದೇವಯಾನಿ ಯಾ
ಶರ್ಮಿಷ್ಠ ರು ಸಿಗಲೇ ಇಲ್ಲ!

ಪಾಪ ನನ್ನಪ್ಪ
ನಮ್ಮಿಂದ ದೂರ ಹೋಗೇ ಬಿಟ್ಟ
ಹೋಗುತ್ತ ಹೋಗುತ್ತ ಅವನ
ಬೆವರ ವಾಸನೆ ನಮಗೆ
ಘಮಘಮಿಸಿ ಬಿಟ್ಟ!!


ಡಾ.ಡೋ.ನಾ.ವೆಂಕಟೇಶ

8 thoughts on “

  1. ಅಪ್ಪನಿಗೆ ಸಿಕ್ಕದ ಪುರುವಿನ ಪ್ರೀತಿ.
    ಅಪ್ಪಂದಿರು ಹಾಗೇ ಬೇರೆಯವರಿಗಾಗಿ ಜೀವ ತೈದವರು.
    ಭಾವನಾತ್ಮಕ ಕವನ

    1. ಧನ್ಯವಾದಗಳು ಸೂರ್ಯ. ಅಪ್ಪನ್ನ ವರ್ಣಿಸಲು ಪದಗಳ ಅಭಾವ !

  2. ಇಂದು ತಂದೆಯವರ ದಿನ. ಈ ಮಂಗಳಕರ ದಿನದಂದು ಅವರ ಸವಿನೆನಪುಗಳ ನಿಮ್ಮಈ ಕವಿತೆ ನಿಜವಾಗಿಯೂ ಭವ್ಯವಾದ ಕೊಡುಗೆಯಾಗಿದೆ.
    ಹೃತ್ಪೂರ್ವಕ ಅಭಿನಂದನೆಗಳು

    1. ನನ್ನ ನೆನಪುಗಳ ಕಿರು ಕಾಣಿಕೆ ಈ ನನ್ನಪ್ಪನ ಕುರಿತ ಕವನ
      ಹೊಗಳಿಕೆ ನಿಮ್ಮ ಸಹೃದಯತೆ
      Thanks!!

Leave a Reply

Back To Top