ನರಸಿಂಗರಾವ ಹೇಮನೂರ-ಮಳೆರಾಯ ಬಾರೋ ಬೇಗ

ಕಾವ್ಯ ಸಂಗಾತಿ

ಮಳೆರಾಯ ಬಾರೋ ಬೇಗ

ನರಸಿಂಗರಾವ ಹೇಮನೂರ

ರಣರಣ ಬಿಸಿಲು ಒಣಗಾಳಿ ಬೀಸಿ
ನೆಲವೆಲ್ಲ ಕಾದ ಹಂಚು,
ಹೊರಗೋಗದಂಗ ಮನೆಯೊಳಗ ಕುಂತು
ತಂಪರಸತಾದ ಮನಸು

ಮುಗಿಲಕಡಿಗಿ ದಿನನಿತ್ಯ ನೋಡತೇವ
ಮಳೆ ಬರುವದೇನ ಎಂದು,
ಮೋಡ ಮುಚ್ಚಿದಾಂಗ ಮುಗಿಲ ಕಂಡರೂ
ಮಳಿ ಸುರಿಯುತಿಲ್ಲ, ಬಿಸಿ ಆರುತಿಲ್ಲ!
ಓಡ್ಯಾವ ಮೋಡ ಕೈ ಬೀಸಿ ನಮಗ
ಮುಂದಿನೂರಿಗೆಂದು!ಮಳೆರಾಯ ಬಾರೋ ಬೇಗ

ರಣರಣ ಬಿಸಿಲು ಒಣಗಾಳಿ ಬೀಸಿ
ನೆಲವೆಲ್ಲ ಕಾದ ಹಂಚು,
ಹೊರಗೋಗದಂಗ ಮನೆಯೊಳಗ ಕುಂತು
ತಂಪರಸತಾದ ಮನಸು

ಮುಗಿಲಕಡಿಗಿ ದಿನನಿತ್ಯ ನೋಡತೇವ
ಮಳೆ ಬರುವದೇನ ಎಂದು,
ಮೋಡ ಮುಚ್ಚಿದಾಂಗ ಮುಗಿಲ ಕಂಡರೂ
ಮಳಿ ಸುರಿಯುತಿಲ್ಲ, ಬಿಸಿ ಆರುತಿಲ್ಲ!
ಓಡ್ಯಾವ ಮೋಡ ಕೈ ಬೀಸಿ ನಮಗ
ಮುಂದಿನೂರಿಗೆಂದು!

ಕೆರೆ ಬಾವಿ ಹಳ್ಳ ಒಣಗಿ ನಿಂತಾವ
ಬತ್ಯಾವ ನೀರಿನೊರತಿ!
ಪ್ರಾಣಿ ಪಕ್ಷಿ ಬಾಯಾರಿ ದಣದ
ಅಲೆದಾವ ಸುತ್ತಿ ಸುತ್ತಿ !

ಹೊಲ ಹಸನಗೈದು ಮಳೆಗಾಗಿ ರೈತ
ಬರೀ ನೋಡೊದಾಯ್ತ ದಾರಿ
ಮುಂಗಾರು ಬಿತ್ತಿ ಬೆಳೆ ಬೆಳೆಯುವಾಸೆ
ಕನಸಾಗಿ ಹೋಯ್ತ ಜಾರಿ!

ಈ ಸೀಮಿ ಮ್ಯಾಲ ಯಾಕಿಂಥ ಮುನಿಸು,
ಮಳೆರಾಯ ಹೇಳು ನಮಗ,
ನಿನ್ನ ದಾರಿ ದಿನದಿನವೂ ಕಾಯ್ದು
ಬಸವಳಿದು ಬೇಡುತೇವ
ನೀನೆಂದು ಬರುವಿ ಅದನಾರ ಹೇಳ
ತಡ ಮಾಡ ಬ್ಯಾಡ ಈಗ!

ಮಳೆಯ ಸುರಿಸು, ನೆಲ ತಂಪು ಮಾಡು,
ಬಿಟ್ಟೆಲ್ಲ ನಿನ್ನ ಕುನಸು,
ನೀನಿಲ್ದ ಇಳೆಯ ಬದುಕೆಲ್ಲ ಬರಡು,
ಸುಖ ಬಾಳು ಬರಿಯ ಕನಸು!


ನರಸಿಂಗರಾವ ಹೇಮನೂರ


Leave a Reply

Back To Top