ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ತನಗಗಳು

1…. ತೂಗುಯ್ಯಾಲೆ ಆಡುತ
ತೇಲಿ ಬಂದಳು ಉಷೆ
ಕಡಲ ಅಲೆ ಮೇಲೆ
ಸರಿಸುತಲಿ ನಿಶೆ…

1…. ಹಸಿರು ಕಂಬಳಿಯ
ಭೂರಮೆಗೆ ಹಾಸುತ
ವನಸಿರಿ ಚಂದದಿ
ನಲಿದಿದೆ ನಗುತ…

3…. ಮೊಗ್ಗೊಂದು ಅರಳಿದೆ
ಹಸಿರೆಲೆ ಮರೆಗೆ
ನಾಚುತಲಿ ನಗುತ
ರವಿಯ ಚುಂಬನಕೆ…

4…. ಇರುಳಿನ ಮುಡಿಗೆ
ಚಂದ್ರ ಹೂ ಮುಡಿಸಿದ
ನಕ್ಕವು ನಕ್ಷತ್ರಗಳು
ಮಿನುಗುತ ಬಾನಿಂದ…

5…. ತಾಯ ಕೈಯ ತುತ್ತು
ಇಹುದು ಅಮೃತ ಧಾರೆ
ಅವಳು ಇತ್ತ ಮುತ್ತು
ಮಮತೆಯ ಜೇನಧಾರೆ…

6…. ಸ್ನೇಹವದು ಸುಂದರ
ಬಾಳಿನಾ ಪಯಣದಿ
ತಣ್ಣೆಳಲು ಅದುವೆ
ಕಷ್ಟದಾ ಸಮಯದಿ…

7…. ಕಂದನಾ ನಗು ಮೊಗ
ತಾಯಿಗದು ಸ್ವರ್ಗವು
ಮುದ್ದು ತೊದಲ್ನುಡಿಯು
ಸಂತಸದಾ ಹೊನಲು…

8…. ದುಡಿಯುತ ಕಷ್ಟದಿ
ಸುರಿಸಿ ಬೆವರನು
ಜಗಕೆಲ್ಲ ನೀಡುವ
ಅನ್ನವನು ರೈತನು…

9…. ಇರಬೇಕು ಮನಸು
ಆಕಾಶದ ತೆರದಿ
ಮರೀಬೇಕು ಮುನಿಸು
ಮಂಜುಹನಿ ತೆರದಿ…

10…. ಭಾವ ಶುದ್ಧವಿರಲು
ಅನುಮಾನ ಏತಕೆ
ಸತ್ಯ ನಡೆಯಿರಲು
ಅಂಜಿಕೆಯು ಏತಕೆ…


About The Author

Leave a Reply

You cannot copy content of this page

Scroll to Top