ಯೋಗೇಂದ್ರಾಚಾರ್ ಎ. ಎನ್.-ನಮಗಿದು ಬೇಕಿತ್ತ

ಕಾವ್ಯ ಸಂಗಾತಿ

ಯೋಗೇಂದ್ರಾಚಾರ್ ಎ ಎನ್

ನಮಗಿದು ಬೇಕಿತ್ತ

ದನಗಳ ಬೂಸಕ್ಕೆ
ಶೇಂಗಾ ಹತ್ತಿ ತೆಂಗು ಹಿಂಡಿಗಳನ್ನು
ರಾಶಿ ರಾಶಿ ಹಾಕಲಾಗಿದೆ

ಡೈರಿಯ ಮಾಲಿಕ
ಹಾಲೆರವ ಹಸುಗಳ ಆರೈಕೆಗಾಗಿ
ದುಪ್ಪಟ್ಟು ಹಾಕಿ
ಎತ್ತುಗಳ ಕೂಳು ಕಸಿದುಕೊಂಡಿದ್ದಾನೆ

ಜನರು ಮಾತ್ರ
ಹಸುಗಳ ಆರೈಕೆ ಕಂಡು
ಜೈ ಜೈ ಎಂದಿದ್ದಾರೆ

ಅಲ್ಲೊಬ್ಬ
ತೋಟದ ಮಾಲಿಗೆ
ಕೆಲಸವಿಲ್ಲದೆ ಸಂಬಳ ಕೊಟ್ಟಿದ್ದಾನೆ
ಹೂ ತೋಟವಿಗೆ ಖಾಲಿ ಖಾಲಿ

ಕಾರಣವಿಷ್ಟೇ
ಮಾಲಿ ಕೆಲಸಕ್ಕೆ ಬರುತ್ತಿಲ್ಲ
ಮಾಲಿಕನಿಗೆ
ಏರಿದ ದರಗಳ ನಿಭಾಯಿಸುವ ತಾಕತ್ತಿಲ್ಲ

ಅಲ್ಲೊಂದು ಸರ್ಕಸ್
ಕುದುರೆ ಸವಾರಿ
ಉಚಿತ ಉಚಿತ ಉಚಿತ
ಬಳೆತೊಟ್ಟು ಕೂರಬೇಕಷ್ಟೆ
ಕೂತವರಿಗೆ ಆನಂದ ಸಾಗರ
ಹೊರಗಿದ್ದ ಮಂದಿಗೆ ಮಾತ್ರ
ಸವಾರಿಯ ತೆರಿಗೆ ಹೊರೆ

ಹೊರೆಯ ಬಗ್ಗೆ ಕೇಳದಿರಿ
ಹೊರೆ ಎಂದವರಿಗೆಲ್ಲ
ಕೃಷ್ಣ ಜನ್ಮಸ್ಥಳದ ಬರೆ
ಉಚಿತವಾದರೂ ಖಚಿತ


Leave a Reply

Back To Top