ಹಂಸಪ್ರಿಯ ಕವಿತೆ-ಹುಡುಕಾಟ

ಕಾವ್ಯ ಸಂಗಾತಿ

ಹಂಸಪ್ರಿಯ

ಹುಡುಕಾಟ

ಉರಗವ ಹುಡುಕ ಹೊರಟ ಗಿಡುಗವೆ,
ಶಿರದಲಾಡುವ ಹಕ್ಕಿಯ ಕಾಣುವ ಪರಿಯಂತೋ..

ಹುಡುಕುತಾ ಆಹಾರವ
ಅಂಬರಲಿ ಹಾರಾಡುವ ಹದ್ದೇ
ಹದ್ದುಮೀರಿ ಅಲೆದಾಟ ನಡೆಸಿವೆ ಅಕ್ಷಿ
ನೆತ್ತಿಯಮೇಲೆ ಮಲಗಿದೆ ಹಕ್ಕಿ,
ಇಕ್ಷಿಸಲಾರೆ ಗರುಡುವೆ.? ಅಲೆದಾಟ ನಡೆದಿದೆ
ನೆಲದ ಮೇಲೆ ಹರಿವ ಹಾವ ಹುಡುಕುತಾ…..

ಇಲಿಯ ಹುಡುಕುತಾ ಹಾವು
ಹಾವ ಹುಡುಕುತಾ ಮುಂಗುಸಿ
ಹಸಿವ ಅಗ್ನಿಯ ತಣಿಸಲು
ಹೋರಾಟ ನಡೆಸಿವೆ “ಅಗ್ನಿಹಂಸವ” ಕಾಣದೆ.

ನೆತ್ತಿಯ ಮೇಲೆ ಬೆಳಕಚೆಲ್ಲುವ ರವಿ,
ಕಾಲ ತಳದಿ ಹಸಿರ ಸಿರಿಹೊತ್ತ ಧರೆ,
ರೆಕ್ಕೆಯ ಜೊತೆ ಬಡಿದಾಡುವ ವಾಯು
ಅಕ್ಷಿಗೆ ನಿಲುಕದ ಅಂಬುದಿ – ಅಂಬರ
ಹಾರಾಟ – ಹುಡುಕಾಟ – ಬಡಿದಾಟ
ಪಂಜರದಿ ಹಾವ ಹಿಡಿವೆಯ ಗರುಡವೇ?
ನೆತ್ತಿಯ ಮೇಲಿನ ಹಕ್ಕಿಯ ಹುಡುಕುವೆಯಾ ಗರುಡವೇ?


Leave a Reply

Back To Top