ನಿಶಾ ಶೆಟ್ಟಿ ಕವಿತೆ-ಮೌನ ಮಾತಾದಾಗ

ಕಾವ್ಯ ಸಂಗಾತಿ

ನಿಶಾ ಶೆಟ್ಟಿ

ಮೌನ ಮಾತಾದಾಗ

ಮೊದಲ ನೋಟಕೆ ಮನಸೂರೆ ಗೊಂಡೆ,
ಅಚ್ಚೆ ಹಾಕಿದಂತೆ ಮನದೊಳಗೆ ನೀ ಬಂದೆ,
ಪದೇ ಪದೇ ತಿರುಗಿ ನೋಡುವಂತೆ ಮಾಡಿದ ಆ ನಿನ್ನ ಕಣ್ಣ ಹೊಳಪಿಗೆ ನಾಸೋತೆ,
ಮಿಡಿಯುವ ಮನಕೆ ನೀನೊಂದು ಸಿಗದೆ ಇರುವ ಮುತ್ತು,
ಸಾಗರದ ಅಲೆಗಳು ನನ್ನ ಮುತ್ತಿಕ್ಕಿ ಹಾದು ಹೋಗುವಂತೆ ನಿಬಂದು ನನ್ನ ಮನವ ಸ್ಪರ್ಶಿಸಿ ಹೋಗುವೆ,
ಅರಿತೋ ಅರಿಯದೆಯೋ ನನ್ನೊಳಗೇ ಒಂಟಿಯಾಗಿ ನಡೆಯುವ ಯುದ್ಧವಿದು “ಎಂದು ಕೊನೆಗೊಳ್ಳಿರಲಿ”

ಪ್ರತಿ ರಾತ್ರಿ ನಿನ್ನದೆ ಗುಂಗಿನಲಿ ಮಲಗುವ ನನಗೇ
ನೀನೆಂದು ಕನಸಾಗಿರುವ ಸ್ವತ್ತು,
ಮೌನದಲಿ ಮಾತಾಗಿ,
ಕಣ್ಣೋಟದಲಿ ಸೆರೆಯಾಗಿ,
ನಿನ್ನ ಮಧುರ ಭಾಂದವ್ಯಕೆ ತಲೆದೂಗಿ,
ನಿನ್ನ ಬಿಸಿ ಉಸಿರ ಬೇಗೆಗೆ ಸುಡುವ ಹೂವಾಗಿ ,
ನನ್ನ ಕಣ್ಣಂಚಿನಲಿ ಸುರಿವ ಹನಿಗೆ ನಿನ್ನ ಮುತ್ತುಗಳ ಮಳೆಯಾಗಿ,
ನಿನ್ನ ಎದೆಯಲಿ ಪುಟ್ಟ ಮಗುವಾಗಿ
ಒಮ್ಮೆಯದಾರು ಸರಿ ನಿನ್ನ ಕೈತೋಳುಗಳ ಬಂದನಕ್ಕೆ ಸಿಲುಕಿಕೊಳ್ಳುವ ನನ್ನೀ ತವಕ “ಎಂದೂ ಕೊನೆಗೊಳ್ಳದಿರಲಿ”

ಕನಸು ಕ಻ಣಲು ಸುಂಕಕೊಡಬೇಕೆ?
ನನ್ನ ಮನದಲಿ ನೀ ನೆಲೆಸಲು ನಿನ್ನ ಸಹಿ ಬೇಕೆ?
ಭಾವನೆಗಳ ಬಂದನದೊಳಗೆ ಸುಡುತಿರುವ ಈ ಹಂಬಲಕೆ,
ಎಷ್ಟೋ ಮಾಸಗಳು ಸಂದಿವೆ ಇನಿಯ ನಿನಗೆ ಇದರ ಅರಿವಿದೆಯೆ ??
ಬರದೆ ಇರುವ ನಿನಗೆ ಕಾದುಕಾದು ಮನಸ್ಸು ಭಾರವಾಗಿ ಒಡೆದುಹೋಗುವ ಮುನ್ನ ಒಮ್ಮೆಯಾದರೂ ತಿರುಗಿ ಪ್ರೀತಿಯಿಂದ ನೋಡುವೆಯಾ ನನ್ನ ??
ಪ್ರೀತಿಯಿಂದ ನೋಡುವೆಯಾ ನನ್ನಾ….
ಸುಧೀರ್ಗವಾದ ಪ್ರೀತಿ ಇದು ನೀನು ಸಿಗದಿದ್ದರು ಮುಂದುವರೆಯುವುದು ನನ್ನೊಳಗೆ ಪರಿಪೂರ್ಣವಾಗಿ,ಕೊನೆವರೆಗೆ ಮೌನವಾಗಿ.
ಮೌನ ಮಾತಾದಾಗ…

————————–


ನಿಶಾ ಶೆಟ್ಟಿ

Leave a Reply

Back To Top