ಇಮಾಮ್ ಮದ್ಗಾರ ಕವಿತೆ-ನಂಗೊತ್ತಿಲ್ಲ

ಕಾವ್ಯಸಂಗಾತಿ

ಇಮಾಮ್ ಮದ್ಗಾರ

ನಂಗೊತ್ತಿಲ್ಲ

ನಾನು ಹೊಸ್ತಿಲೊಳಗಿನ ಹುಡುಗಿ ನೀನು ಬಾನಬಯಲಿನಹುಡುಗ

ಕದತಟ್ಟಿದ್ದು ನೀನಾ ?
ತೆಗೆದದ್ದು ನಾನಾ ಅಥವಾ ತಟ್ಟಿದ್ದು ತೆಗೆದದ್ದು ಒಟ್ಟಿಗೆ ಸಂಭವಿಸಿದ ಮಾಧುರ್ಯಗಳಾ ?? ನಂಗಂತೂ ಗೊತ್ತಿಲ್ಲ !!

ಆ..ದಿನದಿರುಳಲ್ಲಿ ಇದ್ದದ್ದು ನಾವೇ ಮೂರುಜನ
ನಾನು ನೀನು ಜೊತೆಗೆ
ಬೆಳದಿಂಗಳು !
ಕೊಟ್ಟದ್ದು ನಾನಾ ? ತೆಗೆದುಕೊಂಡಿದ್ದು ನೀನಾ?

ಅಥವಾ ಕೊಟ್ಟದ್ದು ತೆಗೆದುಕೊಂಡದ್ದು ಒಟ್ಟಿಗೆ ಸಂಭವಿಸಿದ ಮಾಧುರ್ಯಗಳಾ ?? ನಂಗಂತೂ ಗೊತ್ತಿಲ್ಲ!

ಇರುವಾರು ಋತುಗಳ ಮಧ್ಯೆ ಶಿಶಿರ ವಿತ್ತೊ ?
ವಸಂತನ ಬಾಣವಿತ್ತೊ ?
ಗ್ರೀಷ್ಮನ ಗಾನವಿತ್ತೊ ?

ಅಥವಾ ವಸಂತ ಶಿಶಿರನ ಮದ್ಯೆ ನಡೆದದ್ದು ಮಾಧುರ್ಯಳ ಒಪ್ಪಂದವಿತ್ತೋ ??
ನಂಗಂತೂ ಗೊತ್ತಿಲ್ಲ !

ಹೊಸ್ತಿಲೊಳಗಿನ ಹುಡುಗಿ ಬಾನಬಯಲಿನೊಂದಿಗೆ ಸಖ್ಯ ಬೆಳೆಸಿದ್ದಾಗಿದೆ
ವಸಂತ ನೊಂದಿಗೆ ರಾಜಿಯಾಗುವಾಗ ಮಾಧುರ್ಯಗಳ ಮಜವೇನಿತ್ತೊ ??
ನಂಗಂತೂ ಗೊತ್ತಿಲ್ಲ !!


Leave a Reply

Back To Top