ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ ತನಗಗಳು
೧
ಹಸುರುಟ್ಟ ಧರೆಯು
ಕಲಿಸುವದು ಪಾಠ
ನಿನಗಷ್ಟೆ ಅಲ್ಲವೋ
ಜಗದ ಇಹ ನೋಟ
೨
ಬೆಲೆ ಬೇಡುವದಿಲ್ಲ
ಗಿಡ ಮರ ನೀರದು
ತಂದಿಲ್ಲ ಬರುವಾಗ
ಮತ್ತೆ ಏನು ನಿನ್ನದು
೩
ಬಯಸಬೇಕು ನಾವು
ನಮ್ಮದಷ್ಟನೆ ಬೇಡ
ಅನ್ಯವು ನಮ್ಮದಾಗೊ
ಹುಚ್ಚುತನ ಕಲ್ಪನೆ
೪
ಪ್ರತಿ ದಿನ ಬೆಳಗು
ಸೂರ್ಯನ ಕರುಣೆಯು
ಇಲ್ಲದಿರೆ ಬೆಳಕದು
ಬರಿದು ಕಲ್ಪನೆಯು
:೫
ಮಾತಿನೊಳಿರೊ ಪ್ರೀತಿ
ಕೃತಿಯಲ್ಲೂ ಇದ್ದರೆ
ಇಲ್ಲ ದ್ವೇಷವು ಸಂಕಟ
ಸಾರ್ಥಕವು ಈ ಧರೆ
೬
ಉಚಿತ ಕೊಡಿಗೆಯ
ಬಗೆಗೆ ವಿರೋಧವೇ
ಅ ವಳ ಪ್ರೀತಿಯೊಳು
ಮುತ್ತದು ಉಚಿತವೆ
೭
ಮುಂಜಾನೆ ಅರಳಿದ
ಸುಮದ ಘಮ ಸುತ್ತ
ಆ ದಾರಿಯಲಿ ನಾವು
ಬದುಕಬೇಕುನಿತ್ಯ
೮
ಬೆವರಿಳಿಸೊ ಬಾಳು
ನಮ್ಮ ಅಪ್ಪಂದಿರದು
ಕುಳಿತು ತಿನ್ನೋ ನಾವು
ಸದಾ ಗಪ್ಪಂದಿರದು
೯
ಬದುವಿನಲಿ ನಿಂತ
ರೈತ ಬೆಳೆಗೆ ಫಿದಾ
ಕೊಂಡುಕೊಳ್ಳುವ ಧ್ಯಾನ
ವ್ಯಾಪಾರಿಗದು ಸದಾ
೧೦
ಹರಿದರೂನು ಹಣ್ಣು
ಇರಿಯದು ಗಿಡವು
ಮರೆತು ಮುಟ್ಟಿದರೂ
ನರನ ತುಂಬ ಕೀವು
ವೈ.ಎಂ.ಯಾಕೊಳ್ಳಿ ತನಗಗಳು