ಕಾವ್ಯ ಸಂಗಾತಿ
ಡಾ.ಶಾರದಾಮಣಿ.ಏಸ್. ಹುನಶಾಳ
ಅನಿಕೇತನ ಈ ನಾಡಿನ ಕಣ್ಮಣಿ
ರಾಜ್ಯ ಯುವಜನೋತ್ಸವ ಕಾವ್ಯವಾಚನ ಸ್ಪರ್ಧೆಯಲ್ಲಿ ಬಹಮಾನ ಪಡೆದ ಕವಿತೆ
ಕುಪ್ಪಳ್ಳಿಯ ಕುವರ ರತ್ನ ಪುಟ್ಟಣ್ಣ.. ರಾಮಾಯಣವ ದರ್ಶಸಿ ಜ್ಞಾನಪೀಠವ ಪಡೆದ. ಕುಪ್ಪಳ್ಳಿ ಕಾನನದ ರಂಗುರಂಗಿನ ಪಕ್ಷಿಗಳ, ಸುಮಧುರ ಇಂಚರ ಆಲಿಸಿ,ಆಲಿಸಿ.. ಕಾವ್ಯಧಾರೆಯೂ ಧರೆಗಿಳಿಯಿತು.
ಅಗಣಿತ ತಾರೆಗಳಲ್ಲಿ ಧ್ರುವ ತಾರೆಯಾದೆ. ಸಾಹಿತ್ಯದ ಸರ್ವಸೇವೆಯ ಮಾಡಿ.
ಕಂಪನ್ನು ಸೂಸಿದ ಕುವೆಂಪು.
ರವಿ ಕಾಣದ್ದನ್ನು ಕವಿಯಾಗಿ ಕಂಡೆ.. ಸೂರ್ಯೋದಯ ಸೂರ್ಯಾಸ್ತ ಗಳೆಲ್ಲ, ಗಿಡ,ಮರ,ಬಳ್ಳಿ, ಶುಕ -ಪಿಕ ಗಳೆಲ್ಲ ಗೃಹ, ತಾರೆಗಳೆಲ್ಲ,. ನಿನ್ನ ಸಂಪತ್ತು.
ಅಂತರಂಗದ ವೀಣೆಯ ಸದಾ
ಸಂಬ್ರಮದಿ ನುಡಿಸಿವೆ,.
ನಿನ್ನ ಕಾವ್ಯ ಮಂದಾರ ,
ಬಣ್ಣಿಸಲಸಾಧ್ಯ ನಿನ್ನ ಜ್ಞಾನ ಭಂಡಾರ..
ಸದಾ ಕನ್ನಡಾಂಬೆಗೆ ನಿನ್ನ ನುಡಿಯೇ ಒಂಕಾರ.. ಗಿರಿಶ್ರಿಂಗಗಳ ಬೆಳ್ಳಿ ಮೋಡಗಳ,
ಹಸಿರ ಸಿರಿಯಲಿ ..
ಎಳೆಬಿಸಿಲ ಇಬ್ಬನಿಯoತೆ,
ಮೋಹನನ ಮುರುಳಿಯಂತೆ,
ಭಾಸ್ಕರ ಜಗ ಬೆಳಗಿದಂತೆ.
ಮಲ್ಲಿಗೆ ಮೊಗ್ಗಿನಲ್ಲಿ ಅಡಗಿದ ಸುಗಂಧ,
ಶುಷ್ರಾವ್ಯ ಕವನವಾಗಿ ಹೊರ ಸೂಸುತಿದೆ.
ಈ ಗಂಧದ ಗುಡಿಯಲ್ಲಿ
ನಿಮ್ಮ ಕಾವ್ಯಗಳೆ ಸಪ್ತಸ್ವರ.
ಸಹ್ಯಾದ್ರಿ ಹಸಿರ ಸಿರಿ ವೈಭವಕ್ಕೆ
ನಿಮ್ಮದೇ ಹಸ್ತಾಕ್ಷರ..
ಆ ಲೇಖನಿ ಇಂದ ಮೂಡಿದೆ ದಿವ್ಯ ಅಕ್ಷರಕೂಟ.
ಸದಾ ಶ್ರಿಂಗರಿಸಿವೆ ಈ ಅವನಿಯ ತೋಟ.
ದೂರ ದೂರದಿ ಹಬ್ಬಲಿ,
ನಿಮ್ಮ ಕಾವ್ಯ ಸೌಗಂಧ..
ಇರಲಿ ಕಾವ್ಯ ಸರಸ್ವತಿಯೊಂದಿಗೆ
ನಿಮ್ಮ ಅನುಬಂಧ..
ಸಾರ್ಥಕ ವಾಯಿತು ಈ ಧರಿಣಿ ,
ಪಡೆದು ಇಂಥ ಕನ್ನಡದ ಕಣ್ಮಣಿ..
ಕವಿ ಹೃದಯದ
ಸವಿಭಾವಗಳು ನೂರು..
ಸದಾ ಭವ್ಯದಿ ಸಾಗಲಿ
ನಿಮ್ಮ ಕಲ್ಪನೆಯ ತೇರು.
——————————-
ಡಾ.ಶಾರದಾಮಣಿ.ಏಸ್. ಹುನಶಾಳ .
Superb madam