ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಸಖಿ ಪದ್ಯಗಳು

ನೀನು ಒಳಹೊರಗು
ಅಡ್ಡಾಡುವಾಗ ಬಳೆಗಳ ಶಬ್ಧ
ಕುಳಿತು ಕೇಳಿ ನಾನಾದೆ
ಬರೀ ಮೂಕ,ನಿಶ್ಯಬ್ಧ !!

ನೆರೆ-ಹೊರೆಯವರು ನಮ್ಮ
ನೋಡಿ ಪಟ್ಟರು ಮತ್ಸರ
ಅದು ಒಳಒಳಗೆ ನಮ್ಮಿಬ್ಬರಿಗೂ ತುಂಬಿತು ಹುರುಪು ಸರಸರ !!

ಮನೆಯಲ್ಲಿ ಮಕ್ಕಳು
ಮರಿಗಳಿದ್ದರೂ ಸತಿ
ನೀನಿಲ್ಲದಿರೆ ಮತ್ತೇನಿದೆ
ಎಲ್ಲವೂ ಶೂನ್ಯಗತಿ !!

ಹಗಲೆಲ್ಲಾ ದುಡಿದು ರಾತ್ರಿ
ನನ್ನ ತೋಳಲ್ಲಿ ನೀನು ಬಂಧಿ
ಆಗ ನಿಜವಾಗಿಯೂ ನಾನು
ನಿನ್ನ ಸ್ವರ್ಗದಲ್ಲಿ ಬಂದಿ !!

ಮತ್ತೇಕೆ ಸತಿ ಈ ಪರಿ
ಪದೇ ಪದೇ ಒಣ ಮುನಿಸು
ಓಡಿ ಬಂದು ಬೇಗನೆ
ನನ್ನ ಹೃದಯ ತಣಿಸು !!

ನಿನ್ನ ಅಡುಗೆಯ ರುಚಿ
ನನಗೆ ಅಮೃತ ಸಮಾನ
ತಿಂದು ತಿಂದು ನಾನಾದೆ ದಪ್ಪ,
ಸಿಕ್ಕಂತೆ ನನಗೆ ಅನುದಾನ !!

ತವರು ಮನೆಗೆ
ಹೋದರೆ ನೀನು ಸತಿ
ಮನೆಯಲ್ಲಿ ಹೇಳಲಸಾಧ್ಯ
ನನ್ನ ಪಜೀತಿ !!

ಅಡುಗೆಗೆ ಬಳಸಲು
ಉಪ್ಪು ಕಾರ ಹುಡುಕಿ
ನಾನಾದೆ ಅಂದು ಒಡೆದ
ನೀರಿಲ್ಲದ ಮಡಕಿ !!

ಸನ್ಯಾಸಿಗಳೇಕೆ
ಸಂಸಾರಿಗಳಾದರು ತಿಳಿದಿಲ್ಲ
ನಿನ್ನ ಬಿಟ್ಟು ಒಂದು ಕ್ಷಣ
ನರಕವೆ ನನಗೆಲ್ಲ !!

ಏಳೇಳು ಜನ್ಮಗಳಿಗೆ
ಇರಲಿ ನಮ್ಮಿಬ್ಬರ ಈ ಬಂಧ
ತೀರಿಸಲಸಾಧ್ಯ ನಾನು
ನಿನ್ನ ರುಣಾನುಬಂಧ !!


ಪ್ರೊ. ಸಿದ್ದು ಸಾವಳಸಂಗ

About The Author

Leave a Reply

You cannot copy content of this page

Scroll to Top