ಡಾ ಡೋ.ನಾ.ವೆಂಕಟೇಶ-ನಿನ್ನ ಕಥೆ ನಾನು

ಕಾವ್ಯ ಸಂಗಾತಿ

ನಿನ್ನ ಕಥೆ ನಾನು

ಡಾ ಡೋ.ನಾ.ವೆಂಕಟೇಶ

ಇವಳು ಈಗೀಗ ಹಾಗೇ
ಕಂಡಾಗ ಸುಂಕ
ಕಾಣದಾಗ ಬಿಂಕ

ಬಲಿತಂತೆ ತನುವು
ಬೇಗ ಬೇಗ ಗಡಸು
ಸಿಡುಕು ಸೆಡವು
ತಾ ಹೇಳಿದ ಮಾತು ಸತ್ಯ
ನಿತ್ಯ ನೂತನ ,ಅನೂಚನ
ಮಿಕ್ಕವರೆಲ್ಲ ಬರೆ ಎಳಸು ತಿಳುವಳಿಕೆಯಿಲ್ಲದವು-
ಅಯ್ಯೋ ಪಾಪ ಕೂಸು!

ಮೀರಿದ ಇವಳಾತ್ಮ
ಶುದ್ಧ ಅಲಕ ನಂದಾ ಳ ಥರ
ಹೊಳೆ ಹೊಳೆವ ಪರಿಶುದ್ಧ
ಜಲಾಧಾರ
ಜಗತ್ತನ್ನೆಲ್ಲ ಹೊತ್ತು ನಡೆವ
ಕೂರ್ಮಿಳಾ!

ಬಂದಿರಾ ದಣಿವಾರಿಸಿ ಕೊಳ್ಳಿ
ಹಾಗೆ ಹೋಗ ಬೇಡಿ
ನಾನಿದ್ದೇನೆ ನಿಮ್ಮೆಲ್ಲ
ತುಮುಲಗಳ ಕಾರ್ಪಣ್ಯಗಳ
ಕರ್ತವ್ಯಗಳ ದಾಸಿ
ಹೃದಯ ತುಂಬಿ
ನೆರವೇರಿಸುವೆ ತಲೆ ಮೇಲೆ
ಹೊತ್ತು

ಹೊತ್ತು ಗೊತ್ತಿಲ್ಲದ
ಸೇವೆ ಪ್ರೀತಿ ವಿಶ್ವಾಸ
ಚಿನ್ನ
ಸ್ವಾರ್ಥಿ ನಾ
ನೀ ನಿಜ ಸಾಧ್ವಿ

ನನ್ನ ಕವಿತೆ ನೀನು
ಆದರೆ
ನಾನಾಗ ಬೇಕು
ನಿನ್ನ ಕಥೆ!!


ಡಾ ಡೋ.ನಾ.ವೆಂಕಟೇಶ

4 thoughts on “ಡಾ ಡೋ.ನಾ.ವೆಂಕಟೇಶ-ನಿನ್ನ ಕಥೆ ನಾನು

  1. ಸುಂದರ ಕವನ. ಕವಿತೆಯಲ್ಲಿ ನೀವು ಬಳಸಿದ ಪ್ರತಿಯೊಂದು ಪದವು ನಿಮ್ಮ ಸಂಗಾತಿಯ ಬಗ್ಗೆ ನಿಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಶುಭಾಶಯಗಳು.

Leave a Reply

Back To Top