ಕಾವ್ಯ ಸಂಗಾತಿ
ನಾಗರತ್ನ. ಎಚ್ ಗಂಗಾವತಿ.
ಮೆರವಣಿಗೆಯ ಮೆರಗು.
ಕೈಮುಗಿದು ನಮಿಸೋಣ
ಜೋಡೆತ್ತು ಸಿಂಗರಿಸಿ.
ಕಾಲಿಗೆ ಗೆಜ್ಜೆಯ ಕಟ್ಟಿ
ಕೊರಳಿಗೆ ಹೂಮಾಲೆ. ಕೋಡಿಗೆ ಬಣ್ಣ ಹಚ್ಚಿ ರಂಗು ರಂಗೋಲಿ.
ಡೊಳ್ಳು ನಾದದಿ ಮೆರವಣಿಗೆ
ಹೊರಟಾಗ ನೋಡಲು ಎತ್ತುಗಳ ಸುಂದರ ಚೆಲುವು.
ಅನ್ನವ ನೀಡುವ ಬಸವಗೆ
ಪೂಜಿಸಲು ನೋಡು. ರೈತನ ಪಾಲಿನ ಭಾಗ್ಯದ ನಿಧಿಯು.
ನೀಡುತನ ವರವ
ಗೆದ್ದಾನ ಎಲ್ಲರ ಮನವ.
ಊರಿನ ಅಗಸಿ
ಬಾಗಿಲಿನ ಮುಂದೆ.
ನಿಂತಾನ ನಮ್ಮ ಬಸವ
ಮುಂಗಾರು ಮಳೆಗೆ ಸ್ವಾಗತ ಬಯಸಿ.
ನೈಸ್
Very good lines. Keep it up