ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ -ಅಂಚೆ ಇಲಾಖೆಯ ಅನುಕೂಲಗಳು



ವಿಶೇಷ ಲೇಖನ

ಅಂಚೆ ಇಲಾಖೆಯ ಅನುಕೂಲಗಳು

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಭಾರತ ಸರ್ಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ , ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ ಮತ್ತು ಇದರ ೧೫೬000 ಅಂಚೆ ಕಛೇರಿಗಳು ದೇಶದ್ಯಾOತ ಕಾರ್ಯನಿರ್ವಹಿಸುತ್ತಿವೆ, ಭಾರತ ದೇಶದ ಯಾವುದೇ ಊರಿಗೆ ಹೋದರು ಮೊದಲು ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ, ಆರಂಭವಾಗಿದ್ದು ೧೯೬೪ ರಲ್ಲಿ ಮುಖ್ಯ ಕಾರ್ಯಾಲಯ ದೆಹಲಿ , ನಮ್ಮ ಪ್ರಾದೇಶಿಕ ಕಛೇರಿ ಬೆಂಗಳೂರಿನಲ್ಲಿದೆ , ಜಿಲ್ಲೆಯಲ್ಲಿ ಮುಖ್ಯ ಕಛೇರಿ ಹೊಂದಿದೆ , ಅಂಚೆ ಉತ್ಪನ್ನಗಳು ಪತ್ರ ವ್ಯವಹಾರ, ನೋಂದಾಯಿತ ಪತ್ರ ವ್ಯವಹಾರ ಹಾಗೂ ಶೀಘ್ರ ಅಂಚೆ , ಪಾರ್ಸೆಲ್ ಕೊರಿಯರ್ ಸೇವೆ, ವಿಶೇಷ ಕೊರಿಯರ್ ಸೇವೆ, ಮನಿ ಆರ್ಡರ್, ಮ್ಯುಚುಯಲ್ ಫಂಡ್, ಹಣ ವರ್ಗಾವಣೆ, ರಾಷ್ಟ್ರೀಯ ಉಳಿತಾಯ ಪತ್ರ , ಕಿಸಾನ್ ವಿಕಾಸ್ ಪತ್ರ , ಆವರ್ತಿತ ಠೇವಣಿ , ನಿಶ್ಚಿತ ಠೇವಣಿ , ಸುಕನ್ಯಾ ಸಮೃದ್ಧಿ ಯೋಜನೆ , ಮಹಿಳಾ ಸಮ್ಮಾನ್ ಯೋಜನೆ , ಹೀಗೆ ಹಲವಾರು ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತಂದಿದೆ , ಮಹಿಳೆಯರಿಗಾಗಿ ಇರುವ ಠೇವಣಿ ಯೋಜನೆ ಸೇವೆಗಳು ಲಭ್ಯವಿದೆ , ಮಕ್ಕಳಿಗೆ ಮಹಿಳೆಯರ ಹಿರಿಯ ನಾಗರಿಕರಿಗೆ  ರೈತರಿಗೆ ನೇರ ಖಾತೆಗೆ ಹಣ ಜಮಾ ಮಾಡುವುದು , ಉಳಿತಾಯ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಕಮ್ಮಿ ಹಣಕ್ಕೆ ಪಿಎoಜಿವೈ ಯೋಜನೆ ಒದಗಿಸಿದೆ ಹೀಗೆ ಹಲವಾರು ಹೆಚ್ಚು ಲಾಭವಿರುವ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ .
ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು ೫೨೦೧೯೧ ಇದ್ದರೆ.
ಅಂಚೆ ಇಲಾಖೆಯ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮಂಡ್ಯ ವತಿಯಿಂದ ಸಾರ್ವಜನಿಕರಿಗೆ ಇಂಡಿಯನ್ ಪೋಸ್ಟ್ ಬ್ಯಾಂಕ್ ಖಾತೆ ತೆರೆಯಲಾಗುತ್ತಿದೆ , ಇಚ್ಛೆವುಳ್ಳವರು  ಖಾತೆ ತೆರೆಯಬಹುದು , ಆರಂಭಿಕ ಕಡಿಮೆ ಠೇವಣಿಯಲ್ಲಿ ರೂಪಾಯಿ 200/-ಇರುತ್ತದೆ .


 ಟಾಟಾ ಮತ್ತು ಬಜಾಜ್ ಅಪಘಾತ ವಿಮೆಯನ್ನು ವಾರ್ಷಿಕ ಕಡಿಮೆ ರೂಪಾಯಿ 396/- ಮತ್ತು 258/-ರೂಪಾಯಿಯ ವಿಮಾ ಪ್ರೀಮಿಯಂ ಪಾವತಿಸುವುದರ  ಮೂಲಕ 19 ವರ್ಷ ದಿಂದ 65 ವಯೋಮಾನದವರು ಸ್ತ್ರೀ ಪುರುಷರು ಯುವಕ – ಯುವತಿಯರೆಂಬ ಭೇದವಿಲ್ಲದೆ  ಎಲ್ಲರು ತೆಗೆದುಕೊಳ್ಳಬಹುದು ,
ಹಾಗೂ  ವಾಣಿಜ್ಯ ವ್ಯವಹಾರ ಮಾಡುವ ಬಿಸಿನೆಸ್  ಮ್ಯಾನ್ ಗಳು  ಹಾಗೂ ಅಂಗಡಿ ಮಳಿಗೆ ಹೊಂದಿರುವವರಿಗೆ ಉಚಿತ ಅಂಚೆ ಬ್ಯಾಂಕ್ ಪೇಮೆಂಟ್  ಕ್ಯೂ ಆರ್ ಕೋಡ್ ನೀಡಲಾಗುತ್ತಿದೆ , ಸಾರ್ವಜನಿಕರು  ಮತ್ತು ಖಾಸಗಿ ವ್ಯವಹಾರ ಮಾಡುವವರು ,  ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ .
ಅಂಚೆ ಕಛೇರಿಗಳು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತವೆ, ಶನಿವಾರ ಮಧ್ಯಾಹ್ನದವರೆಗೆ ಮಾತ್ರ ತೆರೆದಿರುತ್ತಾದೆ, ಭಾನುವಾರ ರಜಾ ದಿನವಾಗಿದ್ದು , ಬುಕ್ ಪೋಸ್ಟ್ ಸೇವೆ ಅತಿ ಕಡಿಮೆ ದರದ ಸೇವೆಯಾಗಿದೆ, ಪುಸ್ತಕಗಳು ಕಡತಗಳು ಮುದ್ರಣ ಪತ್ರಗಳು ಇತರೆ ೫ ಕೆ ಜಿ ಮೀರಿರಬಾರದು, ಅಂತರಾಷ್ಟ್ರೀಯ ಪಾರ್ಸೆಲ್ 20 ಕೆ ಜಿ ಯನ್ನು ಮೀರಿರಬಾರದು .
ಅಂಚೆ ಜೀವ ವಿಮೆ ಮತ್ತು ಗ್ರಾಮಾಂತರ ಅಂಚೆ ಜೀವ ವಿಮೆ ತುಂಬಾ ಪ್ರಖ್ಯಾತಿ ಪಡೆದಿದೆ , ಅಂಚೆ ಜೀವ ವಿಮೆ ಸ್ಥಾಪನೆ ಫೆಬ್ರವರಿ 01, 1884 ರಂದು ರಾಜ್ಯ ಕಾರ್ಯದರ್ಶಿ ಅಂಚೆ ಇಲಾಖೆ ನೌಕರರ ಅನುಕೂಲಕ್ಕೆ , ಈ ಕಲ್ಯಾಣ ಯೋಜನೆಯಾಗಿ ಅಂಚೆ ಜೀವ ವಿಮೆಯನ್ನು (PLI) ಪರಿಚಯಿಸಿದರು , ಹೆಚ್ಚುವರಿಯಾಗಿ , ಈ ಸೇವೆಯು 1888 ರಲ್ಲಿ ಟೆಲಿಗ್ರಾಫ್ ಇಲಾಖೆ ಮತ್ತು 1894 P&T ಇಲಾಖೆಯ ಮಹಿಳಾ ಉದ್ಯೋಗಿಗಳನ್ನು ಸೇರಿಸಲು ವಿಸ್ತರಿಸಿತು . ಸ್ವಾತಂತ್ರ್ಯದ ನಂತರ , ಅಂಚೆ ಜೀವ ವಿಮೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು , ರಾಷ್ಟ್ರೀಕೃತ ಬ್ಯಾಂಕುಗಳು , ಸಾರ್ವಜನಿಕ ವಲಯದ ಸಂಸ್ಥೆಗಳು , ಸ್ಥಳೀಯ ಸರ್ಕಾರಿ ಸಂಸ್ಥೆಗಳು , ಹಣಕಾಸು ಸಂಸ್ಥೆಗಳಿಗೆ ವಿಸ್ತರಿಸಲಾಯಿತು ., ಮತ್ತು ಶಿಕ್ಷಣ ಸಂಸ್ಥೆಗಳು ಹಾಗೂ ಇತ್ತೀಚಿಗೆ ವೃತ್ತಿಪರರಿಗೆ ,ಪದವೀಧರರಿಗೂ ಅಂಚೆ ಜೀವ ವಿಮೆಯನ್ನು ನೀಡಲಾಗುತ್ತಿದೆ.
ಪಡೆಯುವ ವಯಸ್ಸು 19 ವಯೋಮಾನದವರಿಂದ 55 ವಯೋಮಾನ ದವರಿಗೆ .
20 ಸಾವಿರ ದಿಂದ ಪ್ರಾರಂಭವಾಗಿ 50 ಲಕ್ಷದ ವರೆವಿಗೂ ವಿಮೆ ಖರೀದಿಸಬಹುದು , ಪಿ ಎಲ್ ಐನ ಪಾಲಿಸಿಗಳು  ಸಂಪೂರ್ಣ ಜೀವ ಭರವಸೆ (ಸುರಕ್ಷಾ), ದತ್ತಿ ಭರವಸೆ (ಸಂತೋಷ), ಪರಿವರ್ತಿತ ಸಂಪೂರ್ಣ ಜೀವ ಭರವಸೆ (ಸುವಿಧಾ), ನಿರೀಕ್ಷಿತ ದತ್ತಿ ಭರವಸೆ (ಸುಮಂಗಲ), ಜಂಟಿ ಜೀವ ಭರವಸೆ  (ಯುಗಳ ಸುರಕ್ಷಾ), ಮಕ್ಕಳ ಪಾಲಿಸಿ (ಬಾಲ ಜೀವನ್ ಭೀಮಾ)
ಗ್ರಾಮಾಂತರ ಅಂಚೆ ಜೀವ ವಿಮೆ 1995 ರಲ್ಲಿ ಆರಂಭವಾಯ್ತು ಇಲ್ಲಿನ ಪಾಲಿಸಿಗಳು ಗ್ರಾಮ ಪ್ರಿಯ , ಗ್ರಾಮ ಸುಮಂಗಲ, ಗ್ರಾಮ ಸಂತೋಷ , ಗ್ರಾಮ ಸುರಕ್ಷಾ .


ಈ ಪಾಲಿಸಿಗಳನ್ನು ಸಾಮಾನ್ಯ ಗ್ರಾಮೀಣ ಜನಗಳು ಪಡೆಯಬಹುದು .
ಕಡಿಮೆ ಪ್ರೀಮಿಯಂ  ಉತ್ತಮ ಅಧಿಕ ಬೋನಸ್ ಪಡೆಯಬಹುದು , ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಲಭ್ಯ , 80C ಆದಾಯ ತೆರಿಗೆಯಿಂದ ವಿನಾಯ್ತಿ , ನಿಮ್ಮ ಬಳಿಗೆ ಉತ್ತಮ ಸುಲಭ ಸೇವೆ  ಹಾಗೂ ಪ್ರೀಮಿಯಂ ಪಾವತಿ , ಆನ್ಲೈನ್ ಪಾವತಿ , ಭಾರತದ ಯಾವುದೇ ಅಂಚೆ ಕಛೇರಿಯಲ್ಲಿ ಸುಲಭ ಪಾವತಿ ಮಾಡಬಹುದು , ವರ್ಷದ ಪಾಲಿಸಿಗಳಿಗೆ ರಿಬಿಟ್ ಗಳು ದೊರೆಯುತ್ತದೆ , ತುಂಬಾ ಅತ್ಯಂತ ಹಳೆಯದಾದ ಒಂದು ವಿಮಾ ಯೋಜನೆಯಾಗಿದೆ , ಆರಂಭಿಕ ದಿನಗಳಲ್ಲಿ ಕೆಲವೇ ನೂರು ಪಾಲಿಸಿಗಳಿಂದ ಆರಂಭವಾಗಿ ಈಗ 49 ಲಕ್ಷಕ್ಕೂ ಅಧಿಕ ಸಕ್ರಿಯ ಪಾಲಿಸಿಗಳೊಂದಿಗೆ ಮಹತ್ತರ ಬೆಳವಣಿಗೆಯೊಂದಿಗೆ ಹೆಮ್ಮೆಯಿಂದ ಮುನ್ನ ನಡೆಯುತ್ತಿದೆ .
ನಿಮ್ಮ ಹಾಗೂ ಕುಟುಂಬದ ಭವಿಷ್ಯ ಕಾಪಾಡಿಕೊಳ್ಳಲು ಒಳ್ಳೆಯ ಅವಕಾಶ ಕಲ್ಪಿಸಿದೆ .
ಮಿತ ಪ್ರೀಮಿಯಂ, ಅಧಿಕ ಬೋನಸ್, ಇಂತಹ ಅನುಕೂಲ ಬೇರೊಂದಿಲ್ಲ , ಜೀವಗಳಿಗೆ ವಿಮೆ ಮತ್ತು ಸಂತಸದ ಖಾತರಿಯತ್ತ ಎರಡು ಮಹತ್ವದ ಹೆಜ್ಜೆಗಳು.., ಪಿಎಲ್ಐ ಸಾಮಾನ್ಯ ಮನುಷ್ಯನ ಜೀವನಕ್ಕೆ ಭದ್ರತೆ ಕಲ್ಪಿಸುವ ಸಲುವಾಗಿ ತನ್ನನ್ನೇ ಮರು ಸಮರ್ಪಸಿಕೊಂಡಿದೆ .
ನಿಮ್ಮ ಸೇವೆಗೆ ಸದಾ ಸಿದ್ಧ , ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬಳಿ ಬರುವ ಪ್ರತಿನಿಧಿಗಳನ್ನು ಸಂಪರ್ಕಿಸಿ , ಇಂದೇ ಉತ್ತಮವಾದ ಜೀವ ವಿಮೆ ಪಾಲಿಸಿಗಳ ಖರೀದಿಸಿ , ನಿಮ್ಮ – ಕುಟುಂಬದ ಭವಿಷ್ಯ ಕಾಪಾಡಿಕೊಳ್ಳಿ .
ಅಂಚೆ ಜೀವ ಇಲಾಖೆಯ ಸೇವೆಯ ಹಿರಿಮೆ ಸುರಕ್ಷಿತ ಸುಲಭ ಸೇವೆ , ಪತ್ರ ವಿಲೇವಾರಿಯಿಂದ ಹಿಡಿದು ವಿವಿಧ ಶೀಘ್ರ ಸೇವೆ ಸಲ್ಲಿಸುತ್ತಿದೆ ,  ಸದುಪಯೋಗಪಡಿಸಿಕೊಳ್ಳಿ .


One thought on “ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ -ಅಂಚೆ ಇಲಾಖೆಯ ಅನುಕೂಲಗಳು

Leave a Reply

Back To Top