ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ನಾನು ಹುಟ್ಟಿ ಬೆಳೆದ ಮನೆ
ನಾನು ಹುಟ್ಟಿ ಬೆಳೆದ ನನ್ನ ಮನೆ
ಬಾಲ್ಯದ ನೆನಪುಗಳಿಗೆ ಎಲ್ಲಿದೆ ಕೊನೆ !!
ತಾಯಿ ಬೇಯಿಸಿದ ಅನ್ನ ತಿಂದದ್ದು ಈಗಲು ಇದೆ ಕಣ್ಮುಂದೆ
ಆ ರುಚಿ ಮರಳಿ ಬರುವುದು ಅಸಾಧ್ಯ ಇನ್ನು ಮುಂದೆ !!
ಅಕ್ಕ ತಮ್ಮಂದಿರೊಂದಿಗೆ ಜಗಳವಾಡಿದ್ದು ಲೆಕ್ಕವಿಲ್ಲ ಸಾವಿರಾರು ಬಾರಿ
ದಿನವೂ ಕೂಡಿ ಕುಳಿತು ಉಂಡದ್ದು ಇನ್ನೂ ನೆನಪಿದೆ ಹಲವಾರು ಬಾರಿ !!
ತಂದೆ ಎಷ್ಟೋಸಾರಿ ಕುಡಿದು ತೂರಾಡುತ್ತಾ ಬರುತ್ತಿದ್ದರು ಈ ಗೂಡಿಗೆ
ಆಗ ಅಮ್ಮ ವಟವಟ ಒದರುತ್ತಿದ್ದಳು ನೋವಿನಲಿ ಅವನಿಗೆ !!
ಹಬ್ಬ-ಹರಿದಿನಗಳಲ್ಲಿ ಹೊಸ ಉಡುಪು ಧರಿಸಿ ಆಟವಾಡಿದ ಸಂಭ್ರಮ
ಅವ್ವ ರುಚಿಯಾದ ಅಡುಗೆ ಮಾಡಿದ್ದು ವಾಸನೆ ಇನ್ನೂ ಇದೆ ಗಮ ಗಮ !!
ಮಳೆ ಜೋರಾಗಿ ಸುರಿದಾಗ ಅಲ್ಲಲ್ಲಿ ನೀರು ಸೋರಿ ಮೈ ಯೆಲ್ಲಾ ಒದ್ದೆ
ಎಷ್ಟೋ ಸಲ ಮ್ಯಾಳಿಗೆಯ ಮೇ ಲೆ ಹಾಕಿದ್ದೇವೆ ಮೇಲು ಮುದ್ದೆ !!
ಹುಟ್ಟುತ್ತಾ ಅಣ-್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಗಾದೆ
ನಮ್ಮದೇ ಬದುಕು ಕಟ್ಟಿಕೊಂಡು ದೂರದೂರಿಗೆ ಹೊರಟೇ ಬಿಟ್ಟೆವು ಹೆತ್ತವರಿಗೂ ಹೇಳದೆ !!
ವಯಸ್ಸಾದ ಹೆತ್ತವರು ಕೊ ನೆಯುಸಿರೆಳದದ್ದು ಇನ್ನೂ ಮಾಸಿಲ್ಲ ನೆನಪು
ಕಣ್ಣು ಒದ್ದೆಯಾಗಿ ಅವರ ಪ್ರೀತಿ ಈಗ ಬರೀ ನೆನಪು !!
ಹೊಲ ಮನೆ ಬಿಡದೆ ಮಾರಿದೆವು ಸಹೋ ದರರು ಪರರಿಗೆ
ಅನಾಥ ಭಾವ ಆವರಿಸಿತು ಈ ಮನಸಿಗೆ !!
ನಮ್ಮ ಮನೆಯಲ್ಲೀಗ ಯಾರೋ ಬೇರೆಯವರ ವಾಸ
ಮುಂದೆ ಹಾದು ಹೋಗುವಾಗ ಏನೋ
ಕಳೆದುಕೊಂಡು ಇದ್ದಂತೆ ಉಪವಾಸ !!
ನನ್ನ ಬಾಲ್ಯದ ನೆನಪುಗಳು ಬಂದು ಕಣ್ಣಾಲಿಯಾಯಿತು.
ಚೆನ್ನಾಗಿದೆ ಸರ್.
ಧನ್ಯವಾದಗಳು ಸರ್
ಕವನ ತುಂಬಾ ಚೆನ್ನಾಗಿದೆ ಸರ್ ಸ್ವಂತ ಮನೆಯ ಫೋಟೋ ಹಾಕಿ. ಅದು ಹೇಗಾದರೂ ಇರಲಿ.
ಸರ್ ಅನಂತ ಧನ್ಯವಾದಗಳು