ಪ್ರಜ್ವಲಾ ಶೆಣೈ ಕವಿತೆ-ಸೊಬಗು

ಕಾವ್ಯ ಸಂಗಾತಿ

ಸೊಬಗು

ಪ್ರಜ್ವಲಾ ಶೆಣೈ

ಪರಿಸರವೇ ನಮ್ಮುಸಿರು
ವನಸಿರಿಯ ಈ ಸೊಬಗು
ಹಚ್ಚ ಹಸಿರು ಸೀರೆಯುಟ್ಟ
ಭೂಮಿ ತಾಯ ಮಡಿಲುII
ಇದು ಭೂತಾಯಿಯ ಮಡಿಲು I

ಹರಿ ಹರಿಯುವ ಜಲಧಾರೆ
ಸವಿ ನಗುವ ಹಾಲ ನೊರೆ
ಬಾನಂಗಣ ಕೋಟಿತಾರೆ
ಭೂಮಿ ತಾಯ ಒಡಲು II
ಇದು ಭೂತಾಯಿಯ ಮಡಿಲು I

ತಂಗಾಳಿಯು ತಣಿವ ಧರೆ
ಕೈಬೀಸಿ ಕರೆವ ಪಚ್ಚ ಸೀರೆ
ಮಿಂಚು ಹೊಳೆವ ಕಣ್ಣ ನೀರೆ
ಭೂಮಿ ತಾಯ ಕಡಲು II
ಇದು ಭೂತಾಯಿಯ ಮಡಿಲು I

ಮುಗಿಲಿಗೆ ನೀ ಆಸರೆ
ಚುಕ್ಕಿಗಳಿಗೆ ಬೆಳ್ಳಿ ತೆರೆ
ಹೊನ್ನ ವರ್ಣ ನೀಲ ತಿರೆ
ಭೂಮಿ ತಾಯ ಹೊನಲು II
ಇದು ಭೂತಾಯಿಯ ಮಡಿಲುI


4 thoughts on “ಪ್ರಜ್ವಲಾ ಶೆಣೈ ಕವಿತೆ-ಸೊಬಗು

  1. ಮರ ಗಿಡ ಬಳ್ಳಿ, ಮಣ್ಣು, ಕಲ್ಲು, ಜಲ ನೆಲ ಇವುಗಳ ಬಗ್ಗೆ ಹೋಗಳುವಷ್ಟು ಉಳಿಸಿದ್ದರಾ ಮೇಡಂ

Leave a Reply

Back To Top