ಮಂಜುಳಾ ಜಿ ಎಸ್ ಪ್ರಸಾದ್ ಕವಿತೆ-ನೆಪ!

ಕಾವ್ಯ ಸಂಗಾತಿ

ಮಂಜುಳಾ ಜಿ ಎಸ್ ಪ್ರಸಾದ್

ನೆಪ!

ನೆಪಗಳೇ ಹಾಗೆ….
ಹೊಳೆಯಲ್ಲಿ ಮುಳುಗುವವನಿಗೆ
ತೇಲುವ ದಿಮ್ಮಿ ಸಿಕ್ಕಂತೆ ಆಸರೆ ಕೈಗೆ!
ನೆಪಗಳೇ ಹಾಗೆ….
ಬರುವುದು ಭೀಕರ ಬರಗಾಲದಲ್ಲಿ
ಅಕಾಲಿಕ ಮಳೆಯಂತೆ ತಂಪು ಚೆಲ್ಲಿ!
ನೆಪಗಳೇ ಹಾಗೆ…..
ಕುಂಟುತ್ತಿದ್ದರೂ ಮಾತು ಮಾತಿಗೆ
ಊರುಗೋಲಾದಂತೆ ನಡೆವವನಿಗೆ!
ನೆಪಗಳೇ ಹಾಗೆ…..
ಕಂಡ ಪದ್ಮಪತ್ರದ ಜಲ ಬಿಂದು
ಅಂಟದಂತೆ ಸಂದರ್ಭದ ಬಂಧು!
ನೆಪಗಳೇ ಹಾಗೆ……
ತಕ್ಷಣ ಸಿಕ್ಕಿದ ಪರಿಹಾರ
ವಿರಾಮಕೆ ಇಳಿಸಿದ ಮನೋಭಾರ!
ನೆಪಗಳೇ ಹಾಗೆ…..
ಸುಳ್ಳು ಸುಳ್ಳಿನ ಕಂತೆ
ಸತ್ಯದ ತಲೆಮೊಟುಕಿ ಚಿಗುರಿದಂತೆ!
ನೆಪಗಳೇ ಹಾಗೆ…
ದಾರಿಗಾಣದ ಕಗ್ಗತ್ತಲ ರಾತ್ರಿಗೆ
ಕಲ್ಪನೆ ಕನಸಿನಂತೆ ಹಿಡಿವ ಕೈದೀವಿಗೆ!


Leave a Reply

Back To Top