ಕಾವ್ಯ ಸಂಗಾತಿ
ಎಸ್ ಜೆ ಟಿ ಸ್ವಾಮಿ
ನನ್ನರಸಿಗೆ
- ಕಂಡು ನಿನ್ನ ರೂಪ ಲಾವಣ್ಯ
ಅನಿಸಿದೆ ನೀನಿಲ್ಲದ ಬಾಳು ನಗಣ್ಯ. - ಅವಳ ಬಣ್ಣ ನಸು ಗೆಂಪು
ಮಾತು ಕಿವಿಗೆ ಇಂಪು
ಸನಿಹ ಸುಗಂಧದ ಕಂಪು
ಜೊತೆ ಇದ್ದರೆ ಬಿರು ಬಿಸಿಲೂ ತಂಪು. - ಏಕತಾನತೆಯ ಬದುಕಿಗೆ ಬೇಕಿತ್ತು ಮದ್ದು..
ನೀ ಬಂದೆ ಮಾಡುತ್ತ ಕಾಲ್ಗೆಜ್ಜೆ ಸದ್ದು..
ಪ್ರಫುಲ್ಲವಾಯಿತು ಮನ ನೀ ಕೊಟ್ಟಾಗ ಮುದ್ದು ..
ಜೀವನವಾಯಿತು ಸ್ವರ್ಗ ನಿನ್ನೊಲುಮೆ ಮೆದ್ದು.. - ಹೂಡಿರುವೆ ಮನಸಿನಲೆ ಬಿಡಾರ..
ಕನಸಿನಲೂ ನಿನ್ನದೇ ಚಿತ್ತಾರ..
ಕೊರಳಿಗಾಕುವೆ ಎಂದು ಮಂದಾರ ಹಾರ..
ಜೀವನ ಪರ್ಯಂತ ಮಾಡೋಣ ಸುಖ ಸಂಸಾರ..
ಎಸ್ ಜೆ ಟಿ ಸ್ವಾಮಿ
Very Nice kavithe.