ಎ.ಎನ್.ರಮೇಶ್. ಗುಬ್ಬಿ ಕವಿತೆ-ಅಭಿಸಾರಿಕೆ.!

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ಅಭಿಸಾರಿಕೆ.!

ಹಾದಿ-ಬೀದಿ ಅಲೆಯುತ್ತಿದ್ದವನ
ನಿತ್ಯ ತನ್ನ ಹಿಂದೆಯೇ ಅಲೆವಂತೆ
ಮಾಡಿದ್ದು ಅವಳ ನೋಟಗಾರಿಕೆ.!

ನೆನಪÀ ಹಂಗಿಲ್ಲದೆ ಬದುಕಿದ್ದವನ
ಸದಾ ತನ್ನದೇ ನೆನಪುಗಳಲಿರುವಂತೆ
ಮಾಡಿದ್ದು ಅವಳ ಎದೆಗಾರಿಕೆ.!

ಕನಸ ಎಗ್ಗಿಲ್ಲದೆ ಹಾಯಾಗಿದ್ದವನ
ಹಗಲಲ್ಲು ಕನಸುತ್ತ ಕನವರಿಸುವಂತೆ
ಮಾಡಿದ್ದು ಅವಳ ಕಾಮಗಾರಿಕೆ.!

ಒಲವ ಸಿಗ್ಗಿಲ್ಲದೆ ನಿರಾಳವಿದ್ದವನ
ಓಲೈಕೆಯ ಗುಂಗಲ್ಲೆ ಒದ್ದಾಡುವಂತೆ
ಮಾಡಿದ್ದು ಅವಳ ಚಮತ್ಕಾರಿಕೆ.!

ಅಂಕೆಶಂಕೆಗೆ ಸಿಗದೆ ಆರಾಮಿದ್ದವನ
ಪ್ರೇಮ ಪಾಶದಲ್ಲೆ ಪರದಾಡುವಂತೆ
ಮಾಡಿದ್ದು ಅವಳ ಬೇಟೆಗಾರಿಕೆ.!

ಹಚ್ಚಿಕೊಳ್ಳದೆ ಹಾರಾಡುತ್ತಿದ್ದವನ
ಮೆಚ್ಚಿ ಹುಚ್ಚಾಗಿ ಶರಣಾಗುವಂತೆ
ಮಾಡಿದ್ದು ಅವಳ ಹೆಚ್ಚುಗಾರಿಕೆ.!

ಪ್ರೇಮದ ಗಂಧಗಾಳಿಯರಿಯದವನ
ಎದೆಯಲಿ ಒಲವ ಮುತ್ತರಳುವಂತೆ
ಮಾಡಿದ್ದು ಅವಳ ಮಹಾಗಣಿಗಾರಿಕೆ.!


ಎ.ಎನ್.ರಮೇಶ್. ಗುಬ್ಬಿ.

One thought on “ಎ.ಎನ್.ರಮೇಶ್. ಗುಬ್ಬಿ ಕವಿತೆ-ಅಭಿಸಾರಿಕೆ.!

Leave a Reply

Back To Top