ಮಾಜಾನ್ ಮಸ್ಕಿ ಕವಿತೆ-ಜಾನ್ ಪದ್ಯಗಳು

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಜಾನ್ ಪದ್ಯಗಳು

ಜೀವನದಲ್ಲಿ ಸಂಘರ್ಷಗಳು ಬೇಕು
ಜಾನ್!!
ನನ್ನನ್ನು ನಾನು ಗೆಲ್ಲಲು

ಕಷ್ಟಗಳು ಹೊಳೆಯಾಗಿ ಹರಿದು ಬರಲಿ
ಜಾನ್!!
ಅನುಭವಗಳು ಜೀವನ ದಾಹ ನೀಗಿಸುತ್ತೆ

ಇತಿಹಾಸ ನೋವು ತುಂಬಿದ ಜೀವಗಳಿಂದ ಸೃಷ್ಟಿ ಆಗಿದೆ
ಜಾನ್!!
ಅನುಭವ ಚಲಾವಣೆಯ ನಾಣ್ಯಕ್ಕಿಂತಲೂ ಮಿಗಿಲು

ಈಗ ಜೀವನದಲ್ಲಿ ಏನು ಉಳಿದಿದೆ ಹೇಳು
ಜಾನ್!!
ನೋವು ನಿವಾರಣ ಮಾತ್ರೆಗಳನ್ನು ನುಂಗುವುದೇ ಅಲ್ಲವೆ


ಮಾಜಾನ್ ಮಸ್ಕಿ

Leave a Reply

Back To Top